ಲಖಿಮ್ಪುರ್ : ಮಹಿಳೆಯ ಮೇಲೆ ನಾಲ್ವರು ಆರೋಪಿಗಳು ಟೆಂಪೋವೊಂದರಲ್ಲಿ ಅತ್ಯಾಚಾರವೆಸಗಿದ್ದಲ್ಲದೇ ಆಕೆಯನ್ನು ಮನಬಂದಂತೆ ಥಳಿಸಿ, ಕಣ್ಣು ಕಿತ್ತು ಹಾಕಿ ಹತ್ಯೆಗೈದ ಹೇಯ ಘಟನೆ ವರದಿಯಾಗಿದೆ. ಲಖಮಿಪುರ್ ಜಿಲ್ಲಾ ಕೇಂದ್ರದಿಂದ 14 ಕಿ.ಮೀ ದೂರದಲ್ಲಿರುವ ಬೋಗಿನಾಡಿ ಪ್ರದೇಶದಲ್ಲಿದ್ದ ತನ್ನ ಆರು ವರ್ಷದ ಪುತ್ರಿಯನ್ನು ಕರೆದುಕೊಂಡು ಬರಲು ಟೆಂಪೋದಲ್ಲಿ ಪ್ರಯಾಣಿಸುತ್ತಿದ್ದಾಗ ಅತ್ಯಾಚಾರ ಘಟನೆ ನಡೆದಿದೆ.