ನವದೆಹಲಿ: ನಗರದ ನ್ಯೂ ಅಶೋಕ್ ಬಡಾವಣೆಯಲ್ಲಿ ಮಾಜಿ ಪತಿಯ ಗೆಳೆಯರು ಮಹಿಳೆಯ ಮೇಲೆ ಗ್ಯಾಂಗ್ರೇಪ್ ಎಸಗಿದ ದಾರುಣ ಘಟನೆ ವರದಿಯಾಗಿದೆ. ಅತ್ಯಾಚಾರಕ್ಕೊಳಗಾದ ಮಹಿಳೆ ಪೊಲೀಸರಿಗೆ ನೀಡಿದ ದೂರಿನಲ್ಲಿ, ನಿನ್ನೆ ರಾತ್ರಿ ನಾನು ಮನೆಯಲ್ಲಿ ಏಕಾಂಗಿಯಾಗಿದ್ದಾಗ ಮಾಜಿ ಪತಿಯ ನಾಲ್ಕು ಮಂದಿ ಗೆಳೆಯರು ಚಾಕೂವಿನಿಂದ ಬೆದರಿಸಿ ಅತ್ಯಾಚಾರವೆಸಗಿದ್ದಾರೆ ಎಂದು ತಿಳಿಸಿದ್ದಾಳೆ.