ಲಖನೌ: ಉತ್ತರ ಪ್ರದೇಶದ ಮುಜಾಫರ್ನಗರದ ಕೋಮುಗಲಭೆಗೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಸುರೇಶ್ ರಾಣಾ ಅವರನ್ನು ಶುಕ್ರವಾರ ಲಖನೌ ಪೊಲೀಸರು ಬಂಧಿಸಿದ್ದಾರೆ. ಮುಜಾಫರ್ನಗರ ಕೋಮುಗಲಭೆ ಸಂದರ್ಭದಲ್ಲಿ ದ್ವೇಷಪೂರಿತ ಭಾಷಣ ಮಾಡಿರುವ ಆರೋಪದ ಮೇಲೆ ರಾಣಾ ಅವರನ್ನು ಅವರ ನಿವಾಸದಲ್ಲಿ ಪೊಲೀಸರು ಬಂಧಿಸಲಾಯಿತು. ರಾಣಾ ಅವರು ಗಲಭೆಗೆ ಸಂಬಂಧಿಸಿದಂತೆ ಬಂಧನಕೊಳ್ಳಗಾಗಿರುವ ಮೊದಲ ರಾಜಕಾರಣಿಯಾಗಿದ್ದಾರೆ. ಇನ್ನುಳಿದಂತೆ ರಾಜಕಾರಣಿಗಳಾದ ಖಾಧಿರ್ ರಾಣಾ, ಜಮೀಲ್ ಅಹಮದ್, ನೂರ್ ಸಲೀಂ ರಾಣಾ, ಮಾಜಿ ಸಂಸದ ಶೀಬುಜಾಮನ್, ಹುಕುಂ ಸಿಂಗ್, ಸಂಗತ್ ಸಿಂಗ್ ಸೋಮ್ ವಿರುದ್ಧ ವಾರೆಂಟ್ ಜಾರಿಯಾಗಿದ್ದು, ಅವರು ಸಹ ಬಂಧನದ ಭೀತಿ ಎದುರಿಸುತ್ತಿದ್ದಾರೆ.