ಮೋದಿ ದೇಶದ ಶತ್ರು, ದೆವ್ವ, ಪೀಡಕ : ಬಿಎಸ್ಪಿ ಅಭ್ಯರ್ಥಿ ಹಾಜಿ ಜಾಕುಬ್

PTI

ಮುರಾದಾಬಾದ್‌ನಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡುತ್ತಿದ್ದ ಮಾಯಾವತಿಯ ಬಹುಜನ ಸಮಾಜವಾದಿ ಪಕ್ಷದ ಉಮೇದುವಾರರಾದ
ಹಾಜಿ ಜಾಕುಬ್ "ಮೋದಿ ದೇಶದ ಬಹುದೊಡ್ಡ ಶತ್ರು, ಮತ್ತು ಪೀಡಕ" ಎಂದು ದೂಷಿಸಿದ್ದಾರೆ.

"ಮೋದಿ ದೇಶದ ಅತ್ಯಂತ ಕೆಟ್ಟ ವ್ಯಕ್ತಿ "ಎಂದ ಜಾಕುಬ್, ಅವರು ಗುಜರಾತ್‌ನಲ್ಲಿ ಜೀವಂತವಾಗಿ ಜನರನ್ನು ಸುಟ್ಟು ಹಾಕಿದರು ಎಂದು ಆರೋಪಿಸಿದ್ದಾರೆ.

ಮುರಾದಾಬಾದ್ | ವೆಬ್‌ದುನಿಯಾ| Last Updated: ಮಂಗಳವಾರ, 15 ಏಪ್ರಿಲ್ 2014 (10:52 IST)
ಭಾರತೀಯ ಜನತಾ ಪಕ್ಷದ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ವಿರುದ್ಧ ಎದುರಾಳಿ ಪಕ್ಷಗಳು ನಾಲಿಗೆ ಮೇಲೆ ಹಿಡಿತವಿಲ್ಲದೇ ಟೀಕಾಸ್ತ್ರ ಪ್ರಯೋಗಿಸುತ್ತಿದ್ದಾರೆ. ಈ ಮೊದಲು ಕಾಂಗ್ರೆಸ್ ಅಭ್ಯರ್ಥಿ ಇಮ್ರಾನ್ ಮಸೂದ್ ಮೋದಿ ವಿರುದ್ಧ ತುಚ್ಛ ಮಾತುಗಳನ್ನಾಡಿದ್ದರೆ, ಈಗ ಉತ್ತರ ಪ್ರದೇಶದ ಬಿಎಸ್ಪಿ ಅಭ್ಯರ್ಥಿ ಹಾಜಿ ಜಾಕುಬ್ ಖುರೇಶಿ ಕೂಡ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ.
ಮೊರದಾಬಾದ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸರ್ವೇಶ್ ಕುಮಾರ್ ಠಾಕೂರ್‌ರವರನ್ನು ಕೂಡ ಅವರು "ತೋಳ" ಎಂದು ಹೀಗಳೆದಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :