Widgets Magazine

ಮೋದಿಗೆ ಸ್ತ್ರೀ ದೋಷ..!

ನವದೆಹಲಿ| ವೆಬ್‌ದುನಿಯಾ|
PTI
PTI
ಶೇಖರ್ ಪೂಜಾರಿ

ಗುಜರಾತ್‌ ಮುಖ್ಯಮಂತ್ರಿ ಮತ್ತು ಬಿಜೆಪಿಯ ಪ್ರಧಾನಮಂತ್ರಿ ಅಭ್ಯರ್ಥಿಯಾಗಿರುವ ನರೇಂದ್ರ ಮೋದಿಗೆ ಸ್ತ್ರೀದೋಷ ಎದುರಾಗಿದೆ ಎಂದು ಹೇಳಲಾಗುತ್ತಿದೆ. ಜ್ಯೋತಿಷ್ಯ ಶಾಸ್ತ್ರಗಳ ಪ್ರಕಾರ ಮೋದಿಯವರಿಗೆ ಸ್ತ್ರೀದೋಷ ಕಾಡಲಿದ್ದು ಮುಂದಿನ 8 ತಿಂಗಳವರೆಗೆ ಮೋದಿಯವರಿಗೆ ಸ್ತ್ರೀದೋಷ ಅಡ್ಡಿಪಡಿಸಲಿದೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಪುಷ್ಟಿ ನೀಡುವಂತೆ ಹಲವಾರು ರಾಜಕೀಯ ವಿದ್ಯುಮಾನಗಳು ನಡೆಯುತ್ತಿವೆ. ಈ ಲೇಖನ ಓದಿ ನಿಮಗೆ ಗೊತ್ತಾಗುತ್ತೆ.

ಗುಜರಾತ್‌ ಮುಖ್ಯಮಂತ್ರಿಯವರಿಗೆ ಸ್ತ್ರೀ ದೋಷ ಇದೆ ಎಂಬುದಾಗಿ ಜ್ಯೋತಿಷಿಗಳು ಹೇಳುತ್ತಿದ್ದಾರೆ. ಇದಕ್ಕೆ ಪುಷ್ಟಿ ನೀಡುವಂತೆ ರಾಹುಲ್‌ ಗಾಂಧಿಯ ಬದಲಿಗೆ ಪ್ರಿಯಾಂಕ ವಾದ್ರಾ 2014ರ ಚುನಾವಣೆಯ ಪ್ರಚಾರದ ಸಾರಥ್ಯವನ್ನು ವಹಿಸಲಿದ್ದಾಳೆ ಎಂಬುದಾಗಿ ಹೇಳಲಾಗುತ್ತಿದೆ.

ಗುಜರಾತ್‌ ಮುಖ್ಯಮಂತ್ರಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ಬಿಜೆಪಿ ಪಕ್ಷ ತನ್ನ ಪ್ರಚಾರದ ಭರಾಟೆಯನ್ನು ಮುಂದುವರಿಸುತ್ತಿದೆ. ಆದ್ರೆ ಇದುವರೆಗೂ ರಾಹುಲ್‌ ಗಾಂಧಿ ಕಾಂಗ್ರೆಸ್‌ ಸಾರಥ್ಯವನ್ನು ವಹಿಸಲಿದ್ದಾರೆ ಎಂಬುದಾಗಿ ಕೇಳಿ ಬರುತ್ತಿತ್ತು. ಅದ್ರೆ ಇದೀಗ ಮೋದಿಗೆ ಸಡ್ಡು ಹೊಡೆಯುವಂತೆ ಪ್ರಿಯಾಂಕ ವಾದ್ರಾ ಗಾಂಧಿ ಕಾಂಗ್ರೆಸ್‌ ಸಾರಥ್ಯವನ್ನು ವಹಿಸಿಕೊಳ್ಳುವ ಸಾಧ್ಯತೆಗಳಿವೆ.

ರಾಹುಲ್‌ ಗಾಂಧಿ ಬದಲಿಗೆ ಪ್ರಿಯಾಂಕ ವಾದ್ರಾ ಯಾಕೆ? ಇನ್ನಷ್ಟು ಮಾಹಿತಿ ಮುಂದಿನ ಪುಟದಲ್ಲಿ...


ಇದರಲ್ಲಿ ಇನ್ನಷ್ಟು ಓದಿ :