ಪಶ್ಚಿಮಬಂಗಾಳದ ಬಿರ್ಬುಮ್ ಜಿಲ್ಲೆಯಲ್ಲಿ ಬೇರೆ ಸಮುದಾಯಕ್ಕೆ ಸೇರಿದ ಪುರುಷನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾಳೆಂಬ ಆರೋಪದ ಮೇಲೆ 20 ವರ್ಷ ವಯಸ್ಸಿನ ಯುವತಿಯೊಬ್ಬಳಿಗೆ ಗ್ರಾಮದ 'ಕೋರ್ಟ್' ಘನಘೋರ ಶಿಕ್ಷೆ ನೀಡುವಂತೆ ಆದೇಶ ನೀಡಿತು. 13 ಮಂದಿ ಯುವಕರಿಗೆ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಮಾಡುವಂತೆ ಗ್ರಾಮದ ಕೋರ್ಟ್ ಆದೇಶ ನೀಡಿದ್ದು, ಈ ಶಿಕ್ಷೆಯಾಗಿತ್ತು. ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆ ಸೇರಿದ ಯುವತಿ ರಾತ್ರಿಯಿಡೀ ತನ್ನ ಮೇಲೆ ಗ್ಯಾಂಗ್ರೇಪ್ ಅನೇಕ ಬಾರಿ ನಡೆಯಿತೆಂದು ತಿಳಿಸಿದ್ದಾಳೆ. ತಾನು ಅಂಕಲ್ ಮತ್ತು ದಾದಾ ಎಂದು ಕರೆಯುತ್ತಿದ್ದ ನೆರೆಹೊರೆಯವರೇ ರೇಪ್ ಮಾಡಿದ್ದಾರೆ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾಳೆ. ಬಿರ್ಬುಮ್ನ ಸುಬಾಲ್ಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ.