ರಾಹುಲ್ ಗಾಂಧಿ ವರ್ಷಕ್ಕೊಮ್ಮೆ ಕಾಣಿಸಿಕೊಳ್ಳುವ ಕೋಗಿಲೆಯಂತೆ; ಮಮತಾ ಲೇವಡಿ

ನಕ್ಸಲ್‌ಬಾರಿ, ಪಶ್ಚಿಮ ಬಂಗಾಳ,, ಬುಧವಾರ, 26 ಮಾರ್ಚ್ 2014 (17:32 IST)

PTI
ರಾಹುಲ್ ಗಾಂಧಿ ವರ್ಷದ ನಿರ್ದಿಷ್ಟ ಸಮಯದಲ್ಲಿ ಕಾಣಿಸಿಕೊಳ್ಳುವ ನುಡಿಗಟ್ಟಿನ ಕೋಗಿಲೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಟೀಕಿಸಿದ್ದಾರೆ.

ರಾಹುಲ್ ಗಾಂಧಿ ಹೆಸರನ್ನು ತೆಗೆದುಕೊಳ್ಳದೇ ಅವರ ಮೇಲೆ ತೀಕ್ಷ್ಣವಾದ ವಾಗ್ದಾಳಿಯನ್ನು ನಡೆಸಿರುವ ,ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ "ದಿಢೀರನೆ ನಾಯಕ" ನಾದ ಕಾಂಗ್ರೆಸ್ ಉಪಾಧ್ಯಕ್ಷನಿಗೆ ತನ್ನ ಕುರಿತ ಸತ್ಯವೇ ತಿಳಿದಿಲ್ಲ ಎಂದು ಮೂದಲಿಸಿದ್ದಾರೆ.

"ದೆಹಲಿಯ ದಿಢೀರ ನಾಯಕರು ಪಶ್ಚಿಮಬಂಗಾಳಕ್ಕೆ ಬಹಳಷ್ಟು ಹಣವನ್ನು ಒದಗಿಸಿದ್ದೇನೆ ಎಂದು ಹೇಳುತ್ತಾರೆ. ನಿಮಗೆ ಹಣ ಸಂದಾಯವಾದ ಖಾತೆಗಳು ಯಾವುದೆಂದು ಗೊತ್ತೇ? ಯಾವ ಕೆಲಸ ನಡೆದಿದೆ ಎಂದು ನಿಮಗೆ ಗೊತ್ತೆ ?ಹಣ ಹೇಗೆ ಬಂತು, ಹೇಗೆ ಅದನ್ನು ಖರ್ಚು ಮಾಡಲಾಯಿತು ಮತ್ತು ಆ ಹಣ ಹೇಗೆ ಹಿಂತಿರುಗಿತು ಎಂಬುದರ ಬಗ್ಗೆ ನಿಮಗೆ ತಿಳಿದಿದೆಯೇ?" ಎಂದು ಅವರು ನಕ್ಸಲ್‌ಬಾರಿಯಲ್ಲಿ ನಡೆದ ಚುನಾವಣಾ ಪ್ರಚಾರದ ಸಮಯದಲ್ಲಿ ಹೇಳಿದ್ದಾರೆ.

ಯೋಗ್ಯ ವ್ಯಕ್ತಿಗಳ ಹೆಸರುಗಳನ್ನು ಹೇಳಲು ಸಿದ್ದ. ಆದರೆ, ಯೋಗ್ಯರಲ್ಲದ ವ್ಯಕ್ತಿಗಳ ಹೆಸರುಗಳನ್ನು ಹೇಳಲು ನಾನು ಬಯಸುವುದಿಲ್ಲ ಎಂದು ತಿಳಿಸಿದ್ದಾರೆ.

"ಅವರು ಬಡವರ ಮತ್ತು ಪೀಡಿತರ ಸಮಸ್ಯೆಗಳನ್ನು ಅರಿಯದ ಶ್ರೀಮಂತರ ಮತ್ತು ಜಮೀನ್ದಾರರ ಮಕ್ಕಳು" ಎಂದ ಬ್ಯಾನರ್ಜಿ, ನೀವು(ಕಾಂಗ್ರೆಸ್) ಕಳೆದ 66 ವರ್ಷಗಳಿಂದ ಅಧಿಕಾರ ನಡೆಸುತ್ತಿದ್ದೀರಿ" ಎಂದು ಹೇಳಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

ಈ ಬೆತ್ತಲೆ ಮಹಿಳೆ ಮಾಡಿದಳು ಗದ್ದಲ

ಸೇಂಟ್‌‌‌‌‌ ಪೀಟರ್ಸ್‌‌‌ಬರ್ಗ್‌‌‌‌ : ಒಬ್ಬ ಮಹಿಳೆ ಬೆತ್ತಲಾಗಿ ಮ್ಯಾಕ್‌‌‌ಡೊನಾಲ್ಡ್‌ ಒಳಗಡೆ ಬಂದು ಗದ್ದಲ ...

ಬಿಸಿಲಿನ ಬೇಗೆಯಿಂದ ಬಸವಳಿದ ಜನರಿಗೆ ತಂಪೆರೆದ ಮಳೆರಾಯ

ಬೆಂಗಳೂರು: ಬಿಸಿಲಿನ ಬೇಗೆಯಿಂದ ಬಸವಳಿದಿದ್ದ ಬೆಂಗಳೂರಿನಲ್ಲಿ ಮಳೆರಾಯ ತಂಪೆರೆದಿದ್ದಾನೆ. ಬೆಂಗಳೂರು ...

ಮೋದಿ ಪ್ರಧಾನಿಯಾಗೋಲ್ಲ, ಯುಪಿಎ ಅಧಿಕಾರಕ್ಕೆ ಬರ್ತದೆ: ಇಬ್ರಾಹಿಂ ಭವಿಷ್ಯ

ಮಂಗಳೂರು: ನರೇಂದ್ರ ಮೋದಿ ಪ್ರಧಾನಮಂತ್ರಿ ಆಗೋದಿಲ್ಲ. ಯುಪಿಎ ಮತ್ತೊಮ್ಮೆ ಅಧಿಕಾರಕ್ಕೆ ಬರುತ್ತದೆ. ಈ ಬಾರಿ ...

ಹಾಸನದಲ್ಲಿ ಮತ್ತೆ ದೇವೇಗೌಡರ ಕೊರಳಿಗೆ ವಿಜಯಮಾಲೆ ಬೀಳುತ್ತಾ?

ಮಾಜಿ ಪ್ರಧಾನಿಯ ಕ್ಷೇತ್ರ ಹಾಸನ ಕೂಡ ಸಮಸ್ಯೆಗಳಿಂದ ಹೊರತಾಗಿಲ್ಲ. ಮಾಜಿ ಪ್ರಧಾನಿಯ ತವರು ಎನ್ನುವ ಖ್ಯಾತಿ ...