Widgets Magazine

ರಾಹುಲ್ ಪ್ರಧಾನಿಯಾದರೆ ಮೋದಿ ಸೇರುತ್ತಾರೆ ಜೈಲು: ಬೋನಿ ಪ್ರಸಾದ್

PTI

"ಮೋದಿ ಒಬ್ಬ ನಿರಂಕುಶವಾದಿ. ಹಾಗಾಗಿ ಅವರು ಹಿಂದೂಸ್ತಾನದಂತಹ ಪ್ರಜಾಸತ್ತಾತ್ಮಕ ದೇಶದ ಪ್ರಧಾನಿಯಾಗಲು ಸಾಧ್ಯವಿಲ್ಲ. ಬಿಜೆಪಿ ಏನು ಬೇಕಾದರೂ ಮಾಡಲಿ. ಮಾಧ್ಯಮಗಳನ್ನು ಖರೀದಿಸಲಿ, ಆದರೆ ಮೋದಿ ಪ್ರಧಾನಿ ಆಗಲು ಸಾಧ್ಯವಿಲ್ಲ" ಎಂದು ಅವರು ಹೇಳಿದ್ದಾರೆ.

"ಮೋದಿ ಬಿಜೆಪಿಯ ಕೇಂದ್ರದಲ್ಲಿ ಬಂದ ಮೇಲೆ ಪಕ್ಷದ ಹಲವಾರು ಸಂಸ್ಥಾಪಕ ಸದಸ್ಯರನ್ನು ಕಡೆಗಣಿಸಲಾಯಿತು" ಎಂದು ವರ್ಮಾ ಆರೋಪಿಸಿದ್ದಾರೆ.

ನವದೆಹಲಿ| ರಾಜೇಶ್ ಪಾಟೀಲ್|
ಭಾರತೀಯ ಜನತಾ ಪಕ್ಷದ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿರುವ ಕೇಂದ್ರ ಸಚಿವ ವರ್ಮಾ ಒಂದು ವೇಳೆ ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿಯಾದರೆ ಗುಜರಾತ್ ದಂಗೆಯ ಆರೋಪದ ಮೇಲೆ ಮೋದಿ 6 ತಿಂಗಳ ಒಳಗೆ ಸರಳುಗಳ ಹಿಂದೆ ಇರಲಿದ್ದಾರೆ ಎಂದು ಹೇಳಿದ್ದಾರೆ.
"ವಾರಣಾಸಿಯಲ್ಲಿ ಮೋದಿ ವಿರುದ್ಧ ಬಲಿಷ್ಠ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತೇವೆ, ಸದ್ಯದಲ್ಲೇ ಆ ಕುರಿತು ನಿರ್ಣಯ ತೆಗೆದುಕೊಳ್ಳಲಾಗುವುದು" ಎಂದು ಅವರು ಹೇಳಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :