Widgets Magazine

ರಿಲಯನ್ಸ್ ಜತೆ ಪೂರ್ವ ಸಂಬಂಧ ಏಕೆ ಬಹಿರಂಗ ಮಾಡಿಲ್ಲ: ಜಂಗ್‌ಗೆ ಪ್ರಶ್ನೆ

ನವದೆಹಲಿ| ವೆಬ್‌ದುನಿಯಾ| Last Modified ಗುರುವಾರ, 13 ಫೆಬ್ರವರಿ 2014 (18:59 IST)
PR
PR
ಆಮ್ ಆದ್ಮಿ ಪಕ್ಷ ಗುರುವಾರ ದೆಹಲಿ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ವಿರುದ್ದ ಹೊಸ ಬಾಣವನ್ನು ಪ್ರಯೋಗಿಸಿದ್ದಾರೆ. ರಿಲಯನ್ಸ್ ಉದ್ಯಮಪತಿ ಮುಖೇಶ್ ಅಂಬಾನಿ ಜತೆ ಸಂಬಂಧದ ಬಗ್ಗೆ ಬಹಿರಂಗ ಮಾಡದಿರುವುದನ್ನು ಆಮ್ ಆದ್ಮಿ ಟೀಕಿಸಿದೆ. ರಿಲಯನ್ಸ್ ಅನಿಲದ ವಿಚಾರವಾಗಿ ಜಂಗ್ ವಿರುದ್ಧ ವಾಗ್ದಾಳಿ ಮಾಡಿದ ಆಮ್ ಆದ್ಮಿಯ ವಕ್ತಾರ ಅಶುತೋಷ್, ಜಂಗ್ ಹಿಂದೆ ಅಂಬಾನಿ ಜತೆ ಕೆಲಸ ಮಾಡಿದ್ದಾರೆ. ಈ ಸತ್ಯಗಳನ್ನು ಅವರ ವೆಬ್‌ಸೈಟ್‌ನಲ್ಲಿ ಏಕೆ ಪೋಸ್ಟ್ ಮಾಡಿಲ್ಲ ಎಂದು ಪ್ರಶ್ನಿಸಿದ್ದಾರೆ.ಲಂಡನ್, ಭಾರತ ಮಂತಾದ ಕಡೆ ಅಂಬಾನಿ ಜತೆ ಜಂಗ್ ಕೆಲಸ ಮಾಡಿದ್ದು, ಅವರ ಥಿಂಕ್ ಟ್ಯಾಂಕ್ ಭಾಗವಾಗಿದ್ದರು. ಈ ಸತ್ಯಗಳನ್ನು ಅಧಿಕೃತ ಜಾಲತಾಣದಲ್ಲಿ ಪೋಸ್ಟ್ ಮಾಡದೇ ಮುಚ್ಚಿಟ್ಟಿದ್ದೇಕೆ ಎಂದು ಪ್ರಶ್ನಿಸಿದ್ದಾರೆ.

ಜಂಗ್ ಅವರ ವಿರುದ್ಧ ಆಮ್ ಆದ್ಮಿ ವಾಗ್ದಾಳಿ ಇದು ಮೂರನೇ ಬಾರಿಯಾಗಿದೆ. ಮುಖ್ಯಮಂತ್ರಿ ಕೇಜ್ರಿವಾಲ್ ಸಂದರ್ಶನವೊಂದರಲ್ಲಿ ಜಂಗ್ ಅವರನ್ನು ಕಾಂಗ್ರೆಸ್ ಏಜೆಂಟ್ ಎಂದು ಕರೆದಿರುವುದು ಸರಿಯಲ್ಲ ಎಂದು ಹೇಳಿದ್ದರು.ನಮ್ಮ ಮಾತಿನ ಬಗ್ಗೆ ಎಚ್ಚರಿಕೆ ಇರಬೇಕು. ನಮ್ಮ ಪಕ್ಷದ ನಾಯಕರ ಮನಸ್ಸಿನಲ್ಲಿ ಹತಾಶೆ ಮೂಡಿರಬಹುದು. ಆದರೆ ಹತಾಶೆ ಎಷ್ಟೇ ತೀವ್ರತೆಯಿಂದ ಕೂಡಿದ್ದರೂ ನಮ್ಮ ಮಾತಿನ ಬಗ್ಗೆ ಎಚ್ಚರವಿರಲಿ ಎಂದು ಕೇಜ್ರಿವಾಲ್ ತಿಳಿಸಿದ್ದರು.


ಇದರಲ್ಲಿ ಇನ್ನಷ್ಟು ಓದಿ :