Widgets Magazine

ರೈತರಿಂದ ಭೂಮಿ ಕಸಿದು ಕೈಗಾರಿಕೋದ್ಯಮಿಗಳಿಗೆ ನೀಡುತ್ತಿರುವ ಮೋದಿ, ಹೂಡಾ: ಕೇಜ್ರಿವಾಲ್

ರೋಹ್ಟಕ್| ರಾಜೇಶ್ ಪಾಟೀಲ್| Last Updated: ಮಂಗಳವಾರ, 15 ಏಪ್ರಿಲ್ 2014 (10:52 IST)
PTI
ಕೈಗಾರಿಕೋದ್ಯಮಿಗಳನ್ನು ಓಲೈಸಲು ರೈತರ ಫಲವತ್ತಾದ ಭೂಮಿಯನ್ನು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಮತ್ತು ಹರಿಯಾಣಾದ ಮುಖ್ಯಮಂತ್ರಿ ಭೂಪಿಂದರ್ ಹೂಡಾ ಕಸಿದುಕೊಳ್ಳುತ್ತಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ ಮುಖಂಡ ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದಾರೆ.

ಕಳೆದ ಮೂರು ದಿನಗಳಿಂದ ಹರಿಯಾಣಾದಲ್ಲಿ ರೋಡ್‌ಶೋ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಕೇಜ್ರಿವಾಲ್, ಹರಿಯಾಣಾ ಮುಖ್ಯಮಂತ್ರಿ ರೈತರಿಂದ ಭೂಮಿಯನ್ನು ಕಸಿದು ರಾಬರ್ಟ್ ವಾದ್ರಾ ಮತ್ತು ಮುಕೇಶ್ ಅಂಬಾನಿಗೆ ಕೊಡುತ್ತಿದ್ದಾರೆ. ವಾದ್ರಾ ಮತ್ತು ಮುಕೇಶ್ ಅಂಬಾನಿಯವರ ಅವ್ಯವಹಾರಗಳ ಬಗ್ಗೆ ಧ್ವನಿ ಎತ್ತಲು ಪ್ರತಿಯೊಬ್ಬರು ಹೆದರುತ್ತಿದ್ದಾರೆ. ಆದರೆ, ನಾನು ಬಹಿರಂಗವಾಗಿ ಅವರ ಅವ್ಯವಹಾರಗಳನ್ನು ಖಂಡಿಸಿದ್ದೇನೆ ಎಂದು ಗುಡುಗಿದರು.

ವಾದ್ರಾ ಮತ್ತು ಸಿಎಂ ಹೂಡಾ ಹರಿಯಾಣಾದ ಜನತೆಯನ್ನು ಲೂಟಿ ಹೊಡೆಯುತ್ತಿದ್ದಾರೆ. ಅನೇಕ ವ್ಯಕ್ತಿಗಳು ವಾದ್ರಾ ವಂಚನೆ ವಿರುದ್ಧ ಮೌನವಾಗಿರುವಂತೆ ಸಲಹೆ ನೀಡಿದರು. ಆದರೆ, ನಾನು ಜೀವಕ್ಕೆ ಹೆದರದೆ ವಾದ್ರಾ ಮತ್ತು ಹೂಡಾ ಅವರ ಭ್ರಷ್ಟಾಚಾರವನ್ನು ಬಹಿರಂಗಗೊಳಿಸಿದ್ದೇನೆ ಎಂದು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :