Widgets Magazine

ಲೋಕಸಭೆಯಲ್ಲಿ ಬಿಜೆಪಿಗೆ ಹೆಚ್ಚಿನ ಸ್ಥಾನ, ಕಾಂಗ್ರೆಸ್‌ಗೆ ಕನಿಷ್ಠ : ಟೈಮ್ಸ್ ಸಮೀಕ್ಷೆ

ನವದೆಹಲಿ| ರಾಜೇಶ್ ಪಾಟೀಲ್|
PTI
ಟೈಮ್ಸ ನೌ ನಡೆಸಿದ ರಾಷ್ಟೀಯ ಸಮೀಕ್ಷೆಯಲ್ಲಿ ಮುಂಬರುವ ಲೋಕಸಭೆಯಲ್ಲಿ ಹೆಚ್ಚಿನ ಕ್ಷೇತ್ರಗಳು ಬಿಜೆಪಿ ಪಾಲಾಗಲಿದ್ದು, ಕಾಂಗ್ರೆಸ್‌ಗೆ ಕನಿಷ್ಠ ಸ್ಥಾನ ದೊರಕಲಿವೆ. ಸಾಕಷ್ಟು ಬಹುಮತದೊಂದಿಗೆ ಎನ್‌ಡಿಎ ಕೇಂದ್ರದಲ್ಲಿ ಸರಕಾರ ರಚಿಸುವ ಅವಕಾಶ ಪಡೆಯಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಸಮೀಕ್ಷೆಯ ಪ್ರಕಾರ ಚುನಾವಣೆಯಲ್ಲಿ ಬಿಜೆಪಿ 202 ಸ್ಥಾನಗಳನ್ನು, ಅದರ ಮಿತ್ರಪಕ್ಷಗಳು 25 ಸ್ಥಾನಗಳನ್ನು ಗೆಲ್ಲಲಿದ್ದು ಒಟ್ಟು ಎನ್‌ಡಿಎ 227 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ.ಪ್ರಬಲ ಸ್ಪರ್ಧೆ ಎದುರಿಸಲಿರುವ ಕಾಂಗ್ರೆಸ್, 89 ಸ್ಥಾನಗಳಿಗೆ ಕುಸಿಯಲಿದೆ. ಮೈತ್ರಿಕೂಟ ಕೇವಲ 100 ಮಾರ್ಕ್ ದಾಟಲು ಸಾಧ್ಯ ಎಂದು ಸಮೀಕ್ಷೆ ಭವಿಷ್ಯ ನುಡಿದಿದೆ.

PTI
PTI
ಇತರರು 215 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ. ಎನ್‌ಡಿಎ ಗೆ 36%, ಯುಪಿಎ 22% ಮತ್ತು ಇತರರಲ್ಲಿ 42% ಮತ ಹಂಚಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ.

ತನ್ನ ಮೊದಲ ಲೋಕಸಭಾ ಚುನಾವಣಾ ಪ್ರದರ್ಶನದಲ್ಲಿ ಆಮ್ ಆದ್ಮಿ ಪಕ್ಷ ಏಳು ಸ್ಥಾನಗಳನ್ನು ಗೆಲ್ಲಲಿದ್ದು ದೆಹಲಿಯ ಹೊರಗೆ ನಾಲ್ಕು ಸ್ಥಾನಗಳನ್ನು ಪಡೆಯಲಿದೆ.


ಇದರಲ್ಲಿ ಇನ್ನಷ್ಟು ಓದಿ :