Widgets Magazine

ವಾದ್ರಾ ವಿವಾದ: ಸೋನಿಯಾ ಕಡೆ ಮಾಯಾವತಿ U ಟರ್ನ್?

ನವದೆಹಲಿ| ರಾಜೇಶ್ ಪಾಟೀಲ್|
PTI
ಅಳಿಯ ಮಾಡಿದ ತಪ್ಪುಗಳಿಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರು ಹೇಗೆ ಹೊಣೆಗಾರರಾಗುತ್ತಾರೆ? ಯಾರೋ ಮಾಡಿದ ತಪ್ಪುಗಳಿಗೆ ಅವರ ಸಂಬಂಧಿಕರನ್ನು ಶಿಕ್ಷಿಸಲಾಗದು ಎಂಬ ಅಚ್ಚರಿಯ ಹೇಳಿಕೆಯನ್ನು ಬಿಎಸ್ಪಿ ಪಕ್ಷದ ಮುಖ್ಯಸ್ಥೆ ಮಾಜಿ ಮುಖ್ಯಮಂತ್ರಿ ಮಾಯಾವತಿ ನೀಡಿದ್ದಾರೆ.

ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಇದೀಗ ಸೋನಿಯಾ ಕಡೆ ಮುಖಮಾಡಿದ್ದಾರೆ. ರಾಬರ್ಟ್ ವಾದ್ರಾ ಅವರ ಭೂ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಪರ ವಾಲಿದ್ದಾರೆ.

ತಪ್ಪು ಮಾಡಿದವರನ್ನು ಬಿಟ್ಟು ಅವರ ಸಂಬಂಧಿಕರನ್ನು ಶಿಕ್ಷಿಸಲು ಸಾಧ್ಯವಿಲ್ಲ ಹೀಗಾಗಿ ರಾಬರ್ಟ್‌ ವಾದ್ರಾ ವಿರುದ್ಧದ ಆರೋಪಗಳಿಗೆ ಸೋನಿಯಾ ಗಾಂಧಿಯವರನ್ನು ಹೊಣೆಮಾಡಲು ಸಾಧ್ಯವಿಲ್ಲ. 'ವಾದ್ರಾ ಪ್ರಕರಣವನ್ನು ಬಿಜೆಪಿ ರಾಜಕೀಯಗೊಳಿಸುತ್ತಿದೆ ಎಂದು ಮಾಯಾವತಿ ಕಿಡಿಕಾರಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :