Widgets Magazine

ವಿಮಾನ ದುರ್ಘಟನೆಯಲ್ಲಿ ಕೂದಲೆಳೆಯ ಅಂತರದಲ್ಲಿ ರಾಹುಲ್ ಗಾಂಧಿ ಪಾರು: ತನಿಖೆಗೆ ಆದೇಶ

ನವದೆಹಲಿ| ರಾಜೇಶ್ ಪಾಟೀಲ್|
PTI
ರಾಯ್‌ಬರೇಲಿಯಿಂದ ಖಾಸಗಿ ಜೆಟ್ ವಿಮಾನದಲ್ಲಿ ಮರಳುತ್ತಿದ್ದ ರಾಹುಲ್ ಗಾಂಧಿಯಿರುವ ವಿಮಾನ ಇಲ್ಲಿನ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದುರ್ಘಟನೆಯಿಂದ ಸ್ವಲ್ಪದರಲ್ಲೇ ತಪ್ಪಿಸಿಕೊಂಡಿದೆ. ಘಟನೆ ಕುರಿತಂತೆ ತನಿಖೆಗೆ ಆದೇಶಿಸಲಾಗಿದೆ.

ರಾಹುಲ್ ಗಾಂಧಿಯಿರುವ ಖಾಸಗಿ ಜೆಟ್ ವಿಮಾನವನ್ನು ರನ್‌ವೇ ನಲ್ಲಿ ಇಳಿಯಲು ಅನುಮತಿ ನೀಡಲಾಗಿತ್ತು. ನಂತರ ಅದೇ ರನ್‌ವೇನಲ್ಲಿ ಭಾರತೀಯ ವಾಯುಪಡೆಗೆ ಸೇರಿದ ವಿಮಾನವನ್ನು ಕೂಡಾ ಗಗನಕ್ಕೆ ಹಾರಲು ಅನುಮತಿ ನೀಡಲಾಗಿತ್ತು.

ಏತನ್ಮಧ್ಯೆ, ಅದೃಷ್ಠವಶಾತ್ ರಾಹುಲ್ ಗಾಂಧಿಯ ವಿಮಾನ ರನ್‌ವೇನಲ್ಲಿ ಇಳಿಯುತ್ತಿರುವಾಗಲೇ ಎಚ್ಚರಗೊಂಡ ವಿಮಾನ ನಿಯಂತ್ರಣ ಅಧಿಕಾರಿಗಳು, ರಾಹುಲ್ ಗಾಂಧಿ ಪ್ರಯಾಣಿಸುತ್ತಿದ್ದ ವಿಮಾನದ ಪೈಲಟ್‌ನನ್ನು ಸಂಪರ್ಕಿಸಿ ಕೂಡಲೇ ರನ್‌ವೇ ಬದಲಿಸುವಂತೆ ಎಚ್ಚರಿಕೆ ನೀಡಿದರು. ಇಲ್ಲವಾದಲ್ಲಿ ಬಾರಿ ಅನಾಹುತ ಸಂಭವಿಸುತ್ತಿತ್ತು ಎನ್ನಲಾಗಿದೆ.

ನಾಗರಿಕ ವಿಮಾನಯಾನ ಇಲಾಖೆಯ ಪ್ರಧಾನ ನಿರ್ದೇಶಕರು ಘಟನೆಯ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :