ಶೀಲಾ ದೀಕ್ಷಿತ್ ವಿರುದ್ಧ ತನಿಖೆಗೆ ಕೇಜ್ರಿವಾಲ್ ಸರ್ಕಾರ ಕೋರಿಕೆ

ನವದೆಹಲಿ| ವೆಬ್‌ದುನಿಯಾ| Last Modified ಸೋಮವಾರ, 3 ಫೆಬ್ರವರಿ 2014 (19:23 IST)
PR
PR
ದೆಹಲಿ ಸರ್ಕಾರ ಸೋಮವಾರ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಪತ್ರ ಬರೆದು ರಾಜಧಾನಿಯಲ್ಲಿ ಅನಧಿಕೃತ ಬಡಾವಣೆಗಳ ನಿರ್ಮಾಣದ ಬಗ್ಗೆ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ವಿರುದ್ಧ ತನಿಖೆ ನಡೆಸಬೇಕೆಂದು ಕೋರಿದೆ. ಅನಧಿಕೃತ ಕಾಲೋನಿಗಳಿಗೆ ಮಾನ್ಯತೆ ನೀಡುವಾಗ ಅಕ್ರಮಗಳು ನಡೆದಿರುವ ಆರೋಪಗಳು ಕೇಳಿಬಂದಿರುವುದರಿಂದ ಶಿಫಾರಸಿನ ಮೇರೆಗೆ ತನಿಖೆ ನಡೆಸಬೇಕೆಂದು ಸರ್ಕಾರ ಮನವಿ ಮಾಡಿದೆ.ಲೋಕಾಯುಕ್ತ ನೀಡಿದ ವರದಿಗೆ ಸಂಬಂಧಿಸಿ ಮುಖ್ಯಮಂತ್ರಿಗಳ ಶಿಫಾರಸನ್ನು ರಾಷ್ಟ್ರಪತಿ ಕೇಳಿದ್ದರು.


ಇದರಲ್ಲಿ ಇನ್ನಷ್ಟು ಓದಿ :