ಸೂರ್ಯನೆಲ್ಲಿ ಅತ್ಯಾಚಾರ ಪ್ರಕರಣಕ್ಕೆ ಹೊಸ ತಿರುವು

ತೋಡುಪುಳ (ಕೇರಳ)| ರಾಜೇಶ್ ಪಾಟೀಲ್| Last Modified ಗುರುವಾರ, 30 ಮೇ 2013 (15:20 IST)
PTI
ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಕೇರಳದ ಸೂರ್ಯನೆಲ್ಲಿ ಬಾಲಕಿ ಮೆಲೆ ಸತತ 45 ದಿನಗಳ ಕಾಲ ಅತ್ಯಾಚಾರವೆಸಗಿದ 42 ಮಂದಿಯಲ್ಲಿ ರಾಜ್ಯಸಭೆಯ ಉಪಸಭಾಪತಿ ಪಿ.ಜೆ. ಕುರಿಯನ್‌ ಕೂಡ ಒಬ್ಬರಾಗಿದ್ದರು, ಇದಕ್ಕೆ ನಾನೇ ಸಾಕ್ಷಿ ಎಂಬರ್ಥದಲ್ಲಿ ಫೆಬ್ರವರಿಯಲ್ಲಿ ಸ್ಫೋಟಕ ಹೇಳಿಕೆ ನೀಡಿದ್ದ, ಕರ್ನಾಟಕದ ಸಾಗರದಲ್ಲಿ ಸೆರೆಸಿಕ್ಕ ಪ್ರಕರಣದ ಏಕೈಕ ದೋಷಿ ಧರ್ಮರಾಜನ್‌ ಇದೀಗ ಉಲ್ಟಾ ಹೊಡೆದಿದ್ದಾನೆ. ಕುರಿಯನ್‌ ಅವರು ನನಗೆ ಗೊತ್ತಿಲ್ಲ. ಅವರ ಫೋಟೋವನ್ನು ಮಾಧ್ಯಮಗಳಲ್ಲಷ್ಟೇ ನೋಡಿದ್ದೇನೆ ಎಂದು ಹೇಳಿದ್ದಾನೆ. ಇದರಿಂದಾಗಿ ದೇಶಾದ್ಯಂತ ಸುದ್ದಿ ಮಾಡಿದ್ದ ಸೂರ್ಯನೆಲ್ಲಿ ಅತ್ಯಾಚಾರ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಕುರಿಯನ್‌ ನಿರಾಳರಾಗಿದ್ದಾರೆ.
ಧರ್ಮರಾಜನ್‌ ಹೇಳಿಕೆ ಆಧರಿಸಿ ಕುರಿಯನ್‌ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸೂರ್ಯನೆಲ್ಲಿ ಸಂತ್ರಸ್ತೆ ನ್ಯಾಯಾಲಯದ ಮೆಟ್ಟಿಲೇರಿದ್ದಳು. ಈ ಹಿನ್ನೆಲೆಯಲ್ಲಿ ಅಭಿಪ್ರಾಯ ತಿಳಿಸುವಂತೆ ಧರ್ಮರಾಜನ್‌ಗೆ ನ್ಯಾಯಾಲಯ ಸೂಚಿಸಿತ್ತು.


ಇದರಲ್ಲಿ ಇನ್ನಷ್ಟು ಓದಿ :