ನವದೆಹಲಿ: ಚೋಕಾಸ್, ಪಾವು, ಪೋನಿ ಮತ್ತು ಗಾಲೋರಿ ಎನ್ನುವ ಶಬ್ದಗಳು ಸಾಮಾನ್ಯ ಜನತೆಗೆ ಅರ್ಥವಾಗುವುದಿಲ್ಲ. ಆದರೆ, ಸೆಕ್ಸ್ ಟಾಯ್ಸ್ಗಳನ್ನು ಮಾರಾಟ ಮಾಡುವ ವ್ಯಾಪಾರಿಗಳು ಬಳಸುವ ಕೋಡ್ವರ್ಡ್ಗಳಾಗಿವೆ. ನವದೆಹಲಿಯ ಪಾಲಿಕಾ ಮಾರುಕಟ್ಟೆಯಲ್ಲಿ 26 ವರ್ಷ ವಯಸ್ಸಿನ ಆಶೀಶ್ ಗುಪ್ತಾ ಎನ್ನುವ ಅಂಗಡಿಯಾತನಿಂದ 21 ಎಲೆಕ್ಟ್ರಾನಿಕ್ ಸೆಕ್ಸ್ ಟಾಯ್ಸ್, ಮೆಡಿಸಿನ್, ನೀಲಿಚಿತ್ರಗಳು ಮತ್ತು ಇತರ ಅಸಭ್ಯ ದೃಶ್ಯಗಳನ್ನು ಹೊಂದಿರುವ ಹಲವಾರು ಸಿಡಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.