ನವದೆಹಲಿ: ಅತ್ಯಾಚಾರ ಆರೋಪದಲ್ಲಿ 20 ವರ್ಷ ಜೈಲು ಶಿಕ್ಷೆಗೊಳಗಾಗಿರುವ ಡೇರಾ ಬಾಬಾ ರಾಮ್ ರಹೀಂ ಸಿಂಗ್ ಗೆ ಸದ್ಯದಲ್ಲಿಯೇ ಹುಚ್ಚು ಹಿಡಿಯುವುದು ಖಂಡಿತಾ ಎಂದು ಸಹ ಖೈದಿಯಾಗಿದ್ದವರೊಬ್ಬರು ಆಂಗ್ಲ ವಾಹಿನಿಯೊಂದಕ್ಕೆ ಹೇಳಿದ್ದಾರೆ. ಬಾಬಾ ವರ್ತನೆ ನೋಡಿದರೆ ಅವರು ಮಾನಸಿಕ ಸ್ಥಿಮಿತ ಕಳೆದುಕೊಳ್ಳಲಿದ್ದಾರೆ ಎನಿಸುತ್ತದೆ ಎಂದು ಇತ್ತೀಚೆಗಷ್ಟೇ ಜಾಮೀನು ಪಡೆದು ಹೊರಬಂದ ಸಹ ಖೈದಿಯೊಬ್ಬರು ಹೇಳಿದ್ದಾರೆ.ಜೈಲಿಗೆ ಬಂದ ದಿನದಿಂದ ಬಾಬಾ ತಮ್ಮಷ್ಟಕ್ಕೆ ತಾವೇ ಅತ್ತಿಂದಿತ್ತ ಸುಳಿದಾಡುತ್ತಾ ದೇವರೇ ನನಗೆ ಏನಾಗುತ್ತೋ?