ನವದೆಹಲಿ: ಪದೇ ಪದೇ ಗಡಿಯಲ್ಲಿ ತಕರಾರು ತೆಗೆಯುತ್ತಿರುವ ಪಾಕಿಸ್ತಾನಕ್ಕೆ ಭಾರತದ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ತಕ್ಕ ಎಚ್ಚರಿಕೆ ನೀಡಿದ್ದಾರೆ. ಪಾಕಿಸ್ತಾನ ಮತ್ತೆ ತನ್ನ ನರಿ ಬುದ್ಧಿ ತೋರಿಸುತ್ತಿದ್ದರೆ, ಇನ್ನೂ ಬುದ್ಧಿ ಕಲಿಯದಿದ್ದರೆ ಮತ್ತೊಂದು ಸರ್ಜಿಕಲ್ ಸ್ಟ್ರೈಕ್ ಅನಿವಾರ್ಯವಾಗುತ್ತದೆ ಎಂದು ರಾವತ್ ಖಡಕ್ ಆಗಿ ಎಚ್ಚರಿಸಿದ್ದಾರೆ.ಕಳೆದ ವರ್ಷ ಸೆಪ್ಟೆಂಬರ್ 28 ರಂದು ಭಾರತೀಯ ಸೇನೆ ಪಾಕ್ ಆಕ್ರಮಿತ ಕಾಶ್ಮೀರದ ಗಡಿಯೊಳಗೆ ನುಗ್ಗಿ ಹಲವು ಉಗ್ರರನ್ನು ಸದೆಬಡಿದು ಬಂದಿತ್ತು. ಇದು