ನವದೆಹಲಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಪುತ್ರ ಜಯ್ ಶಾ ಕಂಪನಿ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ ವೆಬ್ ಸೈಟ್ ವಾಹಿನಿಯ ವರದಿ ಉಲ್ಲೇಖಿಸಿ ಟೀಕಿಸಿರುವ ರಾಹುಲ್ ಗಾಂಧಿ ಇನ್ನೂ ಡ್ಯಾಪರ್ ಹಾಕಿಕೊಳ್ಳುವ ಮಗು ಎಂದು ಬಿಜೆಪಿ ನಾಯಕ ಸಿದ್ಧಾರ್ಥ್ ನಾಥ್ ಸಿಂಗ್ ಹೇಳಿದ್ದಾರೆ. ಪತ್ರಿಕೋದ್ಯಮದಲ್ಲಿ ಇತ್ತೀಚೆಗೆ ಒಂದು ಫ್ಯಾಷನ್ ಶುರುವಾಗಿದೆ. ಪ್ರಮುಖ ವ್ಯಕ್ತಿಗಳ ಬಗ್ಗೆ ಇಲ್ಲಸಲ್ಲದ ಸುದ್ದಿ ಪ್ರಕಟಿಸಿ ಪ್ರಚಾರ ಗಿಟ್ಟಿಸಿಕೊಳ್ಳುವುದು. ಇದೂ ಕೂಡಾ ಅಷ್ಟೇ.