Widgets Magazine

ಒನ್ ರ್ಯಾಂಕ್ ಒನ್ ಪೆನ್ಶನ್ ಶೀಘ್ರ ಜಾರಿಗೊಳಿಸಿ: ಮೋದಿ ಸರ್ಕಾರಕ್ಕೆ ಆರೆಸ್ಸೆಸ್ ತಾಕೀತು

ನವದೆಹಲಿ| Rajesh patil| Last Modified ಬುಧವಾರ, 2 ಸೆಪ್ಟಂಬರ್ 2015 (20:08 IST)
ಒನ್ ರ್ಯಾಂಕ್ ಒನ್ ಪೆನ್ಶನ್ ಕುರಿತಂತೆ ಶೀಘ್ರದಲ್ಲಿ ನಿರ್ಧಾರ ತೆಗೆದುಕೊಳ್ಳಿ ಎಂದು ಆರೆಸ್ಸೆಸ್ ಬಿಜೆಪಿ ನಾಯಕರಿಗೆ ತಾಕೀತು ಮಾಡಿದೆ ಎಂದು ಮೂಲಗಳು ತಿಳಿಸಿವೆ.

ಮೂಲಗಳ ಪ್ರಕಾರ, ಒನ್ ರ್ಯಾಂಕ್ ಒನ್ ಪೆನ್ಶನ್‌ನಲ್ಲಿರುವ ವ್ಯತಿರಿಕ್ತ ಪರಿಣಾಮಗಳನ್ನು ಪರಿಹರಿಸಲು ಸಮಿತಿಯೊಂದನ್ನು ರಚಿಸುವಂತೆ ಆರೆಸೆಸ್ಸ್ ನಾಯಕರು , ಮೋದಿ ಸರಕಾರಕ್ಕೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ.

ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ವಿತ್ತ ಸಚಿವ ಅರುಣ್ ಜೇಟ್ಲಿ, ಅಮಿತ್ ಶಾ, ಎಂ.ವೆಂಕಯ್ಯ ನಾಯ್ಡು, ವಿಎಚ್‌ಪಿ ಕಾರ್ಯಕಾರಿ ಅಧ್ಯಕ್ಷ ಪ್ರವೀಣ್ ತೊಗಾಡಿಯಾ ಅವರನ್ನು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರೊಂದಿಗೆ ಸಭೆಯಲ್ಲಿ ಪಾಲ್ಗೊಂಡಿದ್ದರು ಎಂದು ಬಿಜೆಪಿ ವಕ್ತಾರರು ತಿಳಿಸಿದ್ದಾರೆ.

ದೀರ್ಘಾವಧಿಯಿಂದ ನೆನೆಗುದಿಗೆ ಬಿದ್ದಿರುವ ಬೇಡಿಕೆಯಾದ ಒನ್ ರ್ಯಾಂಕ್ ಒನ್ ಪೆನ್ಶನ್ ಜಾರಿಗೊಳಿಸಬೇಕು ಎಂದು ದೇಶದ ಸುಮಾರು 30 ಲಕ್ಷ ಸೈನಿಕರು ಮತ್ತು ಸೈನಿಕರ ವಿಧುವಾ ಪತ್ನಿಯರು ಕೇಂದ್ರ ಸರಕಾರವನ್ನು ಒತ್ತಾಯಿಸುತ್ತಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :