ಮನೆಯಲ್ಲಿ ಕುಳಿತು ಟಿವಿ ವೀಕ್ಷಿಸುತ್ತಿರುವ ಮೋದಿ

ಗಾಂಧೀನಗರ್| Jaya| Last Updated: ಶುಕ್ರವಾರ, 16 ಮೇ 2014 (14:45 IST)
ಲೋಕಸಭಾ ಮಹಾ ಚುನಾವಣೆಯ ಮತಗಣನೆ ಪ್ರಾರಂಭವಾಗಿದ್ದು, ಭಾರತದ ಮುಂದಿನ ಪ್ರಧಾನಿಯಾಗುತ್ತಾರೆ ಎಂದು ಊಹಿಸಲ್ಪಟ್ಟಿರುವ ಬಿಜೆಪಿ ನಾಯಕ , ಗುಜರಾತ್ ಮುಖ್ಯಮಂತ್ರಿ ನರೇಂದ್ರಮೋದಿ ಗಾಂಧೀನಗರದಲ್ಲಿರುವ ತಮ್ಮ ಮನೆಯಲ್ಲಿ ಕುಳಿತು ದೂರದರ್ಶನವನ್ನು ವೀಕ್ಷಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. 
 
63 ರ ಮೋದಿಗೆ ತಮ್ಮ ಮೈತ್ರಿಕೂಟ ಗೆಲುವನ್ನು ಸಾಧಿಸಲಿದೆಯೇ ಅಥವಾ ಇಲ್ಲವೇ ಎಂಬ ಸ್ಪಷ್ಪ ಚಿತ್ರಣ ಮಧ್ಯಾಹ್ನ 1 ಗಂಟೆಗೆ ದೊರೆಯಲಿದೆ. ಮೂಲಗಳ ಪ್ರಕಾರ ಅವರು ಫಲಿತಾಶ ಪ್ರಕಟವಾಗುವವರೆಗೂ ಮನೆಯಿಂದ ಹೊರಬರುವುದಿಲ್ಲ. ಫಲಿತಾಂಶ ಘೋಷಣೆಯಾದ ತರುವಾಯ ಅವರು ತಮ್ಮ ತಾಯಿಯನ್ನು ಭೇಟಿಯಾಗಿ, ವಡೋದರಾದಲ್ಲಿ ಸಮಾವೇಶವನ್ನು ನಡೆಸಲಿದ್ದಾರೆ.
 
ಸದ್ಯ ವಾರಣಾಸಿಯಲ್ಲಿ ಆಪ್ ನಾಯಕ ಕೇಜ್ರಿವಾಲ್‌ರನ್ನು ಹಿಂದಿಕ್ಕಿ ಮೋದಿ ಮುನ್ನಡೆಯನ್ನು ಸಾಧಿಸಿದ್ದಾರೆ. 
 
ಚುನಾವಣಾ ಪೂರ್ವ ಮತ್ತು ಚುನಾವಣೋತ್ತರ ಸಮೀಕ್ಷೆಗಳ ಪ್ರಕಾರ ಮೋದಿ ನೇತೃತ್ವದ ಎನ್‌ಡಿಎ ಅತಿದೊಡ್ಡ ಪಕ್ಷವಾಗಿ ಗೆದ್ದು ಬರಲಿದೆ. 
 
ಲೋಕಸಭಾ ಚುನಾವಣೆಯ ಲೈವ್ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ಕಿಸಿ
 ಇದರಲ್ಲಿ ಇನ್ನಷ್ಟು ಓದಿ :