ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯ ಕುರಿತು ಇರುವ ಮೋದಿಯ ಜೀವನ ಮತ್ತು ಆರ್ಥಿಕ ದೃಷ್ಟಿ ಎಂಬ ಪುಸ್ತಕ ಚೀನೀ ಭಾಷೆಗೆ ಅನುವಾದವಾಗುತ್ತಿದ್ದು, ಚೀನಾ ವಿಶ್ವವಿದ್ಯಾಲಯದಲ್ಲಿ ಮುಂದಿನ ತಿಂಗಳು ಅದನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಬಿಜೆಪಿಯ ರಾಜ್ಯಸಭಾ ಎಂ.ಪಿ. ತರುಣ್ ವಿಜಯ್ ಬರೆದಿರುವ ಇಂಡಿಯಾಸ್ ಮೋದಿ: ಇನ್ಕ್ರೆಡಿಬಲ್ ಎಮರ್ಜೆನ್ಸ್ ಆಫ್ ಎ ಸ್ಟಾರ್ ಸಿಚುವಾನ್ ವಿಶ್ವವಿದ್ಯಾಲಯದ ದಕ್ಷಿಣ ಏಷ್ಯಾ ಸೆಂಟರ್, ಚೆಂಗ್ಡು ಮೂಲಕ ಪ್ರಕಟಗೊಳ್ಳುತ್ತಿದೆ.