12 ವರ್ಷಗಳಿಂದ ಪುತ್ರಿಯ ಮೇಲೆ ಅತ್ಯಾಚಾರವೆಸಗಿದ ಕಾಮುಕ ತಂದೆ

ಮುಂಬೈ, ಸೋಮವಾರ, 31 ಮಾರ್ಚ್ 2014 (19:19 IST)

ದೇಶದ ಬೀದಿ ಬೀದಿಯಲ್ಲಿ ಮಹಿಳೆಯರ ಸುರಕ್ಷತೆಯ ಬಗ್ಗೆ ನಿರಂತರವಾಗಿ ಚರ್ಚೆಯಾಗುತ್ತಿದೆ. ಆದರೆ, ಹೆಣ್ಣು ತನ್ನದೇ ಮನೆಯಲ್ಲಿ ಸುರಕ್ಷಿತವಾಗಿದ್ದಾಳೆಯೇ? ಇಲ್ಲೊಂದು ಆಘಾತಕಾರಿ ಘಟನೆಯಲ್ಲಿ ತಂದೆಯೇ ತನ್ನ ಮಗಳ ಮೇಲೆ 12 ವರ್ಷಗಳಿಂದ ಅತ್ಯಾಚಾರವೆಸಗಿ 8 ವರ್ಷದ ಬಾಲಕನ ತಂದೆಯಾಗಿದ್ದಾನೆ.

ವರದಿಗಳ ಪ್ರಕಾರ, ಪುತ್ರಿ 14 ವರ್ಷದವಳಾಗಿದ್ದಾಗ ಕಾಮುಕ ತಂದೆ ಲೈಂಗಿಕತೆ ಪಾಠ ಹೇಳಿಕೊಡಲು ಆರಂಭಿಸಿದ್ದಾನೆ. ಸುಮಾರು 12 ವರ್ಷಗಳಿಂದ ನಿರಂತರವಾಗಿ ಮಗಳ ಮೇಲೆ ಅತ್ಯಾಚಾರವೆಸಗಿದ್ದಾನೆ. ಪತ್ನಿ ಮಧ್ಯಪ್ರವೇಶಿಸಲು ಪ್ರಯತ್ನಿಸಿದಾಗ ಮನಬಂದಂತೆ ಥಳಿಸಿ ಕೋಣೆಯಲ್ಲಿ ತಾಯಿ ಮಗಳನ್ನು ಕೂಡಿಹಾಕಿದ್ದಾನೆ.

ತಂದೆಯ ಅತ್ಯಾಚಾರದ ಫಲವಾಗಿ ಮಗಳು ಗರ್ಭವತಿಯಾದಾಗ ಭಾಗವತಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಹೆರಿಗೆ ಮಾಡಿಸಿಕೊಂಡು ಬಂದಿದ್ದಾನೆ.

ನೆರೆಹೊರೆಯವರು ಮಗಳ ಬಗ್ಗೆ ಕೇಳಿದಾಗ,ಆಕೆ ಮಾನಸಿಕವಾಗಿ ಅಸ್ವಸ್ಥಳಾಗಿದ್ದರಿಂದ ಅವಳಿಗೆ ಮದುವೆಯಾಗುವುದಿಲ್ಲ ಎನ್ನುವ ಪಟ್ಟ ಬೇರೆ ಕಟ್ಟಿದ್ದಾನೆ ತಂದೆ ಮಹಾಶಯ.

ಆದರೆ, ಒಂದು ದಿನ ಸಾಮಾಜಿಕ ಕಾರ್ಯಕರ್ತನೊಬ್ಬ ತಾಯಿ ಮತ್ತು ಮಗಳ ಸ್ಥಿತಿಯನ್ನು ಗಮನಿಸಿದಾಗ ಸತ್ಯ ಬಹಿರಂಗವಾಗಿದೆ. ಕಾಮುಕ ತಂದೆಯ ಕಪಿಮುಷ್ಟಿಯಿಂದ ಪತ್ನಿ ಮತ್ತು ಪುತ್ರಿಯನ್ನು ಬಿಡಿಸಲು ನೆರವಾಗುವ ಭರವಸೆ ನೀಡಿ ಪೊಲೀಸರಿಗೆ ದೂರು ನೀಡಿದ್ದಾನೆ.

ಆರೋಪಿಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಮನೆಯ ಮೇಲೆ ದಾಳಿ ಮಾಡಿ ತಾಯಿ ಮತ್ತು ಮಗಳನ್ನು ಪಾರು ಮಾಡಿದ್ದಾರೆ. ಮತ್ತೊಂದು ಕೋಣೆಯಲ್ಲಿ ಆಗ್ರಾದಿಂದ 14 ವರ್ಷ ಬಾಲಕಿಯನ್ನು ಅಪಹರಣ ಮಾಡಿ ತಂದಿದ್ ಬಾಲಕಿ ಕೂಡಾ ಪತ್ತೆಯಾಗಿದ್ದಾಳೆ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

ಈ ಬೆತ್ತಲೆ ಮಹಿಳೆ ಮಾಡಿದಳು ಗದ್ದಲ

ಸೇಂಟ್‌‌‌‌‌ ಪೀಟರ್ಸ್‌‌‌ಬರ್ಗ್‌‌‌‌ : ಒಬ್ಬ ಮಹಿಳೆ ಬೆತ್ತಲಾಗಿ ಮ್ಯಾಕ್‌‌‌ಡೊನಾಲ್ಡ್‌ ಒಳಗಡೆ ಬಂದು ಗದ್ದಲ ...