ಗುವಾಹಟಿ: ನಗರದ ಹಟಿಗಾಂವ್ ಪ್ರದೇಶದಲ್ಲಿ 12 ವರ್ಷ ವಯಸ್ಸಿನ ಬಾಲಕಿಯ ಮೇಲೆ ಐವರು ಅಪ್ರಾಪ್ತರು ಅತ್ಯಾಚಾರವೆಸಗಿದ ಹೇಯ ಘಟನೆ ವರದಿಯಾಗಿದೆ. ಬಾಲಕಿಯ ತಾಯಿ ದಿನಗೂಲಿ ಕೆಲಸದ ನಿಮಿತ್ಯ ಹೊರಗಡೆಯಿದ್ದಾಗ, ಮನೆಯ ಬಳಿಯೇ ನಿನ್ನೆ ರಾತ್ರಿ ಬಾಲಕಿಯ ಗ್ಯಾಂಗ್ರೇಪ್ ಎಸಗಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಬಾಲಕಿಯ ಮನೆಯ ನೆರೆಹೊರೆಯಲ್ಲಿ ವಾಸಿಸುತ್ತಿದ್ದ 12 ರಿಂದ 16 ವರ್ಷ ವಯಸ್ಸಿನೊಳಗಿನ ಬಾಲಕರು ನಿನ್ನೆ ರಾತ್ರಿ ಬಾಲಕಿಯನ್ನು ಮನೆಯಿಂದ ಹೊರಗೆ ಕರೆದು ಅತ್ಯಾಚಾಪವೆಸಗಿದ್ದಾರೆ. ಆರೋಪಿಗಳ ವಿರುದ್ಧ ಬಷಿಷ್ಠ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.