12 ರಾಜ್ಯಗಳಲ್ಲಿ 1 ಲಕ್ಷಕ್ಕೂ ಅಧಿಕ ಆಕ್ಟಿವ್ ಕೊರೋನಾ ಕೇಸ್

ನವದೆಹಲಿ| Krishnaveni K| Last Modified ಮಂಗಳವಾರ, 4 ಮೇ 2021 (09:13 IST)
ನವದೆಹಲಿ: ಕೊರೋನಾ ದೇಶದಲ್ಲಿ ರುದ್ರತಾಂಡವವಾಡುತ್ತಿದೆ. ನಿನ್ನೆ ಒಂದೇ ದಿನ 3.68 ಲಕ್ಷಕ್ಕೂ ಅಧಿಕ ಪ್ರಕರಣಗಳು ಕಂಡುಬಂದಿದೆ.
 

ಇದರ ನಡುವೆ ಆರೋಗ್ಯ ಸಚಿವಾಲಯ 12 ರಾಜ್ಯಗಳಲ್ಲಿ 1 ಲಕ್ಷಕ್ಕೂ ಅಧಿಕ ಆಕ್ಟಿವ್ ಕೊರೋನಾ ಪ್ರಕರಣಗಳು ಇವೆ ಎಂದು ಮಾಹಿತಿ ನೀಡಿದೆ. ಇದು ಕೊರೋನಾ ಎರಡನೇ ಅಲೆಯ ಭೀಕರತೆಗೆ ಸಾಕ್ಷಿ.
 
ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಮತ್ತಷ್ಟು ರಾಜ್ಯಗಳಲ್ಲಿ ಲಾಕ್ ಡೌನ್, ಗಡಿ ಬಂದ್ ಮಾಡಲಾಗಿದೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ರಾಜ್ಯದಲ್ಲೂ ಇನ್ನೂ ಒಂದು ವಾರ ಲಾಕ್ ಡೌನ್ ವಿಸ್ತರಣೆಯಾದರೂ ಅಚ್ಚರಿಯಿಲ್ಲ.
ಇದರಲ್ಲಿ ಇನ್ನಷ್ಟು ಓದಿ :