ಬಾಲ್ಕನಿಯಲ್ಲಿ ಸಿಲುಕಿದ್ದ ನಾಯಿಮರಿಯನ್ನು ರಕ್ಷಿಸಲು ಹೋಗಿ 12 ವರ್ಷದ ಬಾಲಕಿ 9ನೇ ಮಹಡಿಯಿಂದ ಬಿದ್ದು ಮೃತಪಟ್ಟ ಆಘಾತಕಾರಿ ಘಟನೆ ಉತ್ತರಪ್ರದೇಶದ ಗಾಜಿಯಾಬಾದ್ ನಲ್ಲಿ ಸಂಭವಿಸಿದೆ. 7ನೇ ತರಗತಿ ವಿದ್ಯಾರ್ಥಿನಿ ಜ್ಯೋತ್ಸನಾ ಮೃತಪಟ್ಟ ದುರ್ದೈವಿ. ಈಕೆ ಮನೆಯೊಳಗೆ ನಾಯಿಮರಿ ಜೊತೆ ಆಟವಾಡುತ್ತಿದ್ದಳು. ಈ ವೇಳೆ ನಾಯಿಮರಿ ಬಾಲ್ಕನಿಯ ಕಿಟಕಿಗೆ ಹಾಕಿದ್ದ ನೆಟ್ ಒಳಗೆ ಸಿಲುಕಿಕೊಂಡಿತ್ತು. ನೆಟ್ ಬಿಡಿಸುವಾಗ ಆಯತಪ್ಪಿ ಮಹಡಿ ಮೇಲಿಂದ ಬಿದ್ದು ಮೃತಪಟ್ಟಿದ್ದಾಳೆ. ತಾಯಿ ಕಿರಣ್ ಮನೆಯೊಳಗೆ ಇದ್ದು ಅಡುಗೆ