Widgets Magazine

1500 ರೂ ಕೊಡ್ತೇವೆ ಸುಮ್ಮನಿರಿ: ರೇಪ್‌ಗೊಳಗಾದ ಬಾಲಕಿಯ ಪೋಷಕರಿಗೆ ಹಿರಿಯರ ಫರ್ಮಾನ್

ಹೈದ್ರಾಬಾದ್| ರಾಜೇಶ್ ಪಾಟೀಲ್|
ವಿಶಾಖ್‌ಪಟ್ಟಣಂ ಜಿಲ್ಲೆಯ ಗ್ರಾಮವೊಂದರಲ್ಲಿ 11 ವರ್ಷದ ಬಾಲಕಿಯ ಮೇಲೆ 30 ವರ್ಷ ವಯಸ್ಸಿನ ವ್ಯಕ್ತಿಯೊಬ್ಬ ಅತ್ಯಾಚಾರವೆಸಗಿದ ಹೇಯ ಘಟನೆ ವರದಿಯಾಗಿದೆ.

ಶುಕ್ರವಾರದಂದು ರಾತ್ರಿ ಆರೋಪಿ ಅಪ್ಪಾರಾವ್ ಎಂಬಾತ 11 ವರ್ಷ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದರೂ ರವಿವಾರದಂದು ಬಾಲಕಿಯ ಪೋಷಕರು ಆರೋಪಿಯ ವಿರುದ್ಧ ದೂರು ದಾಖಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ

ಬಾಲಕಿಯ ಪೋಷಕರು ಗ್ರಾಮದ ಹಿರಿಯರಿಗೆ ನ್ಯಾಯ ದೊರಕಿಸಿಕೊಡುವಂತೆ ಕೋರಿದಾಗ, ಬಾಲಕಿಯ ಚಿಕಿತ್ಸೆಗಾಗಿ 1500 ರೂಪಾಯಿಗಳನ್ನು ಪರಿಹಾರವಾಗಿ ನೀಡುತ್ತೇವೆ ಬಾಯ್ಮುಚ್ಚಿ ಸುಮ್ಮನಿರಿ ಎಂದು ಫರ್ಮಾನ್ ಹೊರಡಿಸಿದ್ದಾರೆ ಸೋಕಾಲ್ಡ್ ಹಿರಿಯರು.

ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಗ್ರಾಮದ ಗ್ರಾಮ ಪಂಚಾಯಿತಿಯ ಹಿರಿಯರ ವಿರುದ್ಧ ತನಿಖೆ ನಡೆಸಲು ಆದೇಶಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ತಿಳಿಸಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :