ಗದ್ದೆಯಲ್ಲಿ ಸಿಕ್ಕ ಅಪ್ರಾಪ್ತೆಯ ಮೃತದೇಹ: ಗ್ಯಾಂಗ್ ರೇಪ್ ಶಂಕೆ

ಲಕ್ನೋ| Krishnaveni K| Last Modified ಮಂಗಳವಾರ, 16 ನವೆಂಬರ್ 2021 (12:08 IST)
ಲಕ್ನೋ: 16 ವರ್ಷದ ಅಪ್ರಾಪ್ತ ಯುವತಿಯ ಮೃತದೇಹ ಕಬ್ಬಿನ ಗದ್ದೆಯಲ್ಲಿ ಪತ್ತೆಯಾಗಿದ್ದು, ಕುಟುಂಬಸ್ಥರು ಗ್ಯಾಂಗ್ ರೇಪ್ ಎಂದು ಶಂಕಿಸಿ ಪೊಲೀಸರಿಗೆ ದೂರು ನೀಡಿದ್ದಾರೆ.

ಕೋಚಿಂಗ್ ಕ್ಲಾಸ್ ಗೆಂದು ಹೋಗಿದ್ದ ಯುವತಿ ಮನೆಗೆ ಮರಳಲಿಲ್ಲ. ಹುಡುಕಾಟ ನಡೆಸಿದರೂ ಸಿಗದೇ ಹೋದಾಗ ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದರು.


ಹುಡುಕಾಟ ನಡೆಸಿದಾಗ ಯುವತಿಯ ಮೃತದೇಹ ನಗ್ನಸ್ಥಿತಿಯಲ್ಲಿ ಸ್ಥಳೀಯ ಕಬ್ಬಿನ ಗದ್ದೆಯಲ್ಲಿ ಪತ್ತೆಯಾಗಿದೆ. ಜೊತೆಗೆ ಅಕ್ಕಪಕ್ಕದಲ್ಲಿ ಮದ್ಯದ ಬಾಟಲಿಗಳೂ ಪತ್ತೆಯಾಗಿದೆ. ಹೀಗಾಗಿ ಕುಟುಂಬಸ್ಥರು ತಮ್ಮ ಮಗಳ ಮೇಲೆ ಗ್ಯಾಂಗ್ ರೇಪ್ ನಡೆದಿರಬಹುದೆಂದು ಶಂಕಿಸಿ ದೂರು ನೀಡಿದ್ದಾರೆ. ಇದೀಗ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :