25 ವರ್ಷದ ಮಹಿಳೆಯ ಮೇಲೆ 19 ವರ್ಷದ ಯುವತಿಯಿಂದ ರೇಪ್

ನವದೆಹಲಿ| pavithra| Last Modified ಶುಕ್ರವಾರ, 5 ಅಕ್ಟೋಬರ್ 2018 (07:11 IST)
ನವದೆಹಲಿ : ಐಪಿಎಸ್ ಸೆಕ್ಷನ್ 377 ರ ಅನ್ವಯ ಸ್ವಲಿಂಗಿಗಳು ಲೈಂಗಿಕ ಕ್ರಿಯೆ ನಡೆಸಿದರೆ ಅಪರಾಧವಲ್ಲ ಎಂದು ಸುಪ್ರೀಂ ಕೋರ್ಟ್ ನಿಂದ ಮಹತ್ವದ ತೀರ್ಪು ಪ್ರಕಟವಾದ ಬಳಿಕ ಇದೇ ಮೊದಲ ಬಾರಿಗೆ
ಸ್ವಲಿಂಗಿಯೇ ಇನ್ನೊಬ್ಬ ಸ್ವಲಿಂಗಿಯ ಮೇಲೆ ಎಸಗಿದ ಘಟನೆ ಬೆಳಕಿಗೆ ಬಂದಿದೆ.


ಈ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ. 25 ವರ್ಷದ ಮಹಿಳೆಯೊಬ್ಬಳು ಕೆಲಸದ ಸಲುವಾಗಿ ದೆಹಲಿಗೆ ಆಗಮಿಸಿದ್ದ ವೇಳೆ 19 ವರ್ಷದ ಯುವತಿ ತನ್ನನ್ನು ಲೈಂಗಿಕವಾಗಿ ಬಳಸಿಕೊಂಡಿದ್ದು, ಇದಕ್ಕೆ ಸಂಬಂಧಿಸಿದಂತೆ ಸೀಮಾಪುರಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲು ಹೋದಾಗ ಪೊಲೀಸರು ಪ್ರಕರಣ ದಾಖಲು ಮಾಡಿಕೊಳ್ಳಲು ನಿರಾಕರಿಸಿದ್ದಾರೆ ಎಂದು ದೂರಿದ್ದಾಳೆ.


ಆದರೆ ಈ ಬಗ್ಗೆ ಕಾನೂನು ತಜ್ಞರು ಇದು ಸಹಮತವಲ್ಲದ ಲೈಂಗಿಕ ಕ್ರಿಯೆ ಆಗಿರುವುದರಿಂದ ಬೇರೆ ಸೆಕ್ಷನ್​ಗಳ ಪ್ರಕಾರ ಪೊಲೀಸರು ಪ್ರಕರಣ ದಾಖಲಿಸಬಹುದಾಗಿದೆ ಎಂದಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್


ಇದರಲ್ಲಿ ಇನ್ನಷ್ಟು ಓದಿ :