ತಿರುಪತಿ: ಪಟಾಕಿ ಗೋಡೌನ್ ಗೆ ಬೆಂಕಿ ಬಿದ್ದಪರಿಣಾಮ ಇಬ್ಬರು ಬಾಲಕರು ದಾರುಣವಾಗಿ ಮೃತಪಟ್ಟಿರುವ ಘಟನೆ ತಿರುಪತಿಯ ರೇಣುಗುಂಟ ರಸ್ತೆಯಲ್ಲಿ ನಡೆದಿದೆ. ಮೃತ ಬಾಲಕರು ಮಂಜು(14), ಮಣಿ(10) ಎಂದು ತಿಳಿದು ಬಂದಿದೆ. ರಘ ಅಲಿಯಾಸ್ ಖಲ್ನಾಯಕ್ ಎಂಬುವವರಿಗೆ ಸೇರಿದ ಗೋದಾಮ್ ಇದಾಗಿದ್ದು , ಗೋದಾಮ್ನ ಮೋಟಾರ್ ಸ್ವೀಚ್ ಆಫ್ ಮಾಡಲು ತೆರಳಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಸ್ಥಳಕ್ಕೆ ಆಗಮಿಸಿರುವ ಆಗ್ನಿಶಾಮಕ ದಳದ ಸಿಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.