ನವದೆಹಲಿ : ಮಾಡೆಲ್ ಒಬ್ಬರ ಹೇರ್ಸ್ಟೈಲ್ನ್ನು ವಿರೂಪಗೊಳಿಸಿದ್ದಕ್ಕಾಗಿ ಆಕೆಗೆ 2 ಕೋಟಿ ರೂ. ಪರಿಹಾರ ನೀಡುವಂತೆ ಐಟಿಸಿ ಸಲೂನ್ ವಿರುದ್ಧ ರಾಷ್ಟ್ರೀಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್ ಬುಧವಾರ ತಡೆ ನೀಡಿದೆ.ಎನ್ಸಿಡಿಆರ್ಸಿ ಆದೇಶವನ್ನು ಪ್ರಶ್ನಿಸಿ ಐಟಿಸಿ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿ ಅನಿರುದ್ಧ ಬೋಸ್ ಮತ್ತು ಸುಧಾಂಶು ಧುಲಿಯಾ ಅವರಿದ್ದ ಪೀಠವು ವಿಚಾರಣೆ ನಡೆಸಿತು. ಪರಿಹಾರವನ್ನು ಸುಮ್ಮನೆ ಕೇಳುವುದಲ್ಲ, ಅದಕ್ಕೆ ಸೂಕ್ತವಾದ ಕಾರಣ ಹಾಗೂ ಸಾಕ್ಷ್ಯ