ಕಲ್ಲಿದ್ದಲು ಇಲಾಖೆಯ ಮಾಜಿ ಕಾರ್ಯದರ್ಶಿ ಎಚ್.ಸಿ ಗುಪ್ತಾ ಸೇರಿ ಮೂವರು ಮಾಜಿ ಅಧಿಕಾರಿಗಳು ಬಹುಕೋಟಿ ಕೋಟಿ ರೂಪಾಯಿ ಕಲ್ಲಿದ್ದಲು ಹಗರಣದಲ್ಲಿ ದೋಷಿಗಳೆಂದು ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ. ಮಧ್ಯಪ್ರದೇಶದ ಕಲ್ಲಿದ್ದಲು ನಿಕ್ಷೇಪವನ್ನ ಖಾಸಗಿ ಕಂಪನಿಗೆ ಹಂಚಿಕೆ ಮಾಡಿದ ಯೋಜನೆಯಲ್ಲಿ ನಡೆದಿದ್ದ ಹಗರಣ ಇದಾಗಿದ್ದು, ಇದೇ ಮೊದಲ ಬಾರಿಗೆ ಮೂವರು ಅಧಿಕಾರಿಗಳು ತಪ್ಪಿತಸ್ಥರೆಂದು ಸಾಬೀತಾಗಿದೆ. ಭ್ರಷ್ಟಾಚಾರ ಕಾಯ್ದೆಯಡಿ ಮಾಜಿ ಅಧಿಕಾರಿಗಳಾದ ಎಚ್.ಸಿ. ಗುಪ್ತಾ, ಕೆ.ಎಸ್. ಕ್ರೋಫಾ, ಕೆ.ಸಿ. ಸಮ್ರಿಯಾ