ಮಳೆಗಾಲ ಶುರುವಾಗಿದೆ. ಪ್ರವಾಸ ಪ್ರಿಯರು ಪ್ರಕೃತಿ ಸೌಂದರ್ಯವನ್ನು ಆನಂದಿಸಲು ಉತ್ತಮ ಪ್ರವಾಸಿ ತಾಣಗಳನ್ನು ಹುಡುಕುವ ಸಮಯ ಬಂದಂತಾಗಿದೆ. ಈ ಮೂರು ಪ್ರಮುಖ ಸ್ಥಳಗಳ ವಿವರವನ್ನು ಪಡೆದುಕೊಂಡು ನಿಮ್ಮ ಪ್ರವಾಸವನ್ನು ಇಂದೇ ಆರಂಭಿಸಿ. ಶೋಜಾ, ಹಿಮಾಚಲ ಪ್ರದೇಶ ಹಿಮಾಚಲ ಪ್ರದೇಶದ ಕಣಿವೆಗಳಲ್ಲಿ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿರುವ ಅದ್ಭುತ ತಾಣ ಶೋಜಾ. ಈ ಪ್ರದೇಶ ಸಂಪೂರ್ಣವಾಗಿ ಅಭಿವೃದ್ಧಿ ಹೊಂದದಿದ್ದರು ಪ್ರಕೃತಿ ಸೌಂದರ್ಯದಿಂದ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಪ್ರವಾಸಿಗರು ಜನಸಂದಣಿಯಿಂದ ತಪ್ಪಿಸಿಕೊಂಡು ಈ ಪ್ರದೇಶಕ್ಕೆ