ನವದೆಹಲಿ: ಮಾಟ ಮಂತ್ರ ಮಾಡಿ ತಮ್ಮ ನವಜಾತ ಮಗುವಿನ ಜೀವ ತೆಗೆದಿದ್ದಾರೆಂದು ಆರೋಪ ಹೊತ್ತಿದ್ದ ಒಂದೇ ಮನೆಯ ಮೂವರನ್ನು ಹತ್ಯೆ ಮಾಡಲಾಗಿದೆ.ಈ ಘಟನೆ ನಡೆದಿರುವುದು ಜಾರ್ಖಂಡ್ ನಲ್ಲಿ. ಬಿರ್ಸಾ ಮುಂಡಾ (48), ಪತ್ನಿ ಸುಕ್ರು ಪುರ್ತಿ (43) ಮತ್ತು ಅವರ ಪುತ್ರಿ ಸೋಮ್ವಾರ್ ಪುರ್ತಿ (20) ಎಂಬವರನ್ನು ರುಂಡ ಮುಂಡ ಬೇರ್ಪಡಿಸಿ ಹತ್ಯೆ ಮಾಡಲಾಗಿದೆ. ಇವರ ಮೃತದೇಹ ಸಮೀಪದ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದೆ. ಸ್ಥಳೀಯರ ಪ್ರಕಾರ ಕೆಲವು ದಿನಗಳ ಮೊದಲು