ಉತ್ತರ ಕಾಶ್ಮೀರದ ಕುಪ್ವಾರ ಜಿಲ್ಲೆಯ ಜಗ್ತಿಯಾಲ್-ಹೈಯಾಮಾ ಗ್ರಾಮದಲ್ಲಿ ನಡೆದ ಎನ್`ಕೌಂಟರ್`ನಲ್ಲಿ ಮೂವರು ಲಷ್ಕರ್ ಇ ತೊಯಿಬಾ ಉಗ್ರರನ್ನ ಹೊಡೆದುರುಳಿಸಲಾಗಿದೆ. ಅದೇ ಪ್ರದೇಶದಲ್ಲಿ ಓಡಾಡುತ್ತಿದ್ದ 6 ವರ್ಷದ ಬಾಲಿಕಯೂ ಗುಂಡು ತಾಗಿ ಮೃತಪಟ್ಟಿದ್ದು, ಮತ್ತೊಬ್ಬರಿಗೆ ಗಾಯಗಳಾಗಿವೆ. ಬುಧವಾರ ಬೆಳಗಿನ ಜಾವ ಹಳ್ಳಿಯಲ್ಲಿ ಉಗ್ರರು ಅಡಗಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ರಾಷ್ಟ್ರೀಯ ರೈಫಲ್, ಸಿಆರ್ಪಿಎಫ್ ಜಂಟಿ ಕಾರ್ಯಾಚರಣೆಯಲ್ಲಿ ಪ್ರದೇಶವನ್ನ ಸುತ್ತುವರೆದಿತ್ತು. 8 ಗಂಟೆಗಳ ಕಾಲ ನಡೆದ ಗುಂಡಿನ ಚಕಮಕಿಯಲ್ಲಿ