ಲಕ್ನೋ: ಮೂರು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ನೆರೆಮನೆಯಾತ ಬಳಿಕ ಆಕೆಯನ್ನು ಕೊಲೆ ಮಾಡಿದ ಘಟನೆ ಉತ್ತರ ಪ್ರದೇಶದ ಸಿತಾಪುರ್ ನಲ್ಲಿ ನಡೆದಿದೆ.ಸೋಮವಾರ ಸಂಜೆ ಐದು ಗಂಟೆಯಿಂದ ಬಾಲಕಿ ನಾಪತ್ತೆಯಾಗಿದ್ದಳು. ಈ ವೇಳೆ ಬಾಲಕಿಯ ಪೋಷಕರು ಹೊರಗೆ ಹೋಗಿದ್ದರು. ಈ ಸಂದರ್ಭದಲ್ಲಿ ಬಿಸ್ಕಟ್ ನ ಆಸೆ ತೋರಿಸಿ ಮಗುವನ್ನು ಬಳಿಗೆ ಕರೆದ ಆರೋಪಿ ರಾಜು ತನ್ನ ಮನೆಗೆ ಕರೆದುಕೊಂಡು ಹೋಗಿ ಕೃತ್ಯವೆಸಗಿದ್ದಾನೆ.ಅಷ್ಟೇ ಅಲ್ಲದೆ, ಹೀನ ಕೃತ್ಯ ಬೆಳಕಿಗೆ ಬಾರದಂತೆ