ಹೈದರಾಬಾದ್: ಆರ್ಥಿಕವಾಗಿ ಹಿಂದುಳಿದ ವರ್ಗಗಳ (ಇ.ಡಬ್ಲ್ಯೂ.ಎಸ್) ಕೋಟಾದಡಿದಲ್ಲಿ ಸರ್ಕಾರಿ ಹುದ್ದೆ ಮತ್ತು ಸೇವೆಗಳಲ್ಲಿ ಮಹಿಳೆಯರಿಗೆ ಶೇ 33.3ರಷ್ಟು ಮೀಸಲಾತಿ ನೀಡಲು ತೆಲಂಗಾಣ ಸರ್ಕಾರ ನಿರ್ಧರಿಸಿದೆ. ಇ.ಡಬ್ಲ್ಯೂ.ಎಸ್ ಮೀಸಲಾತಿಯನ್ನು ಅನುಷ್ಠಾನಗೊಳಿಸಲು ಮಂಗಳವಾರ ಅಲ್ಲಿನ ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ. ಆರ್ಥಿಕವಾಗಿ ಹಿಂದುಳಿದ ವರ್ಗಗಳ (ಇ.ಡಬ್ಲ್ಯೂ.ಎಸ್) ಕೋಟಾದಡಿಯಲ್ಲಿ ಮೀಸಲಾಗಿರುವ ಹುದ್ದೆಗಳು ಮತ್ತು ಸೇವೆಗಳ ಆರಂಭಿಕ ನೇಮಕಾತಿಯಲ್ಲಿ ಶೇ 33.3 ರಷ್ಟು ಮಹಿಳೆಯರಿಗೆ ಹಂಚಿಕೆಯಾಗಬೇಕು ಎಂದು ಮುಖ್ಯ ಕಾರ್ಯದರ್ಶಿ ಸೋಮೇಶ್ ಕುಮಾರ್ ತಿಳಿಸಿದ್ದಾರೆ. ಆರ್ಥಿಕವಾಗಿ