ನವದೆಹಲಿ : ಜಮ್ಮು ಹಾಗೂ ಕಾಶ್ಮೀರದಲ್ಲಿ 370 ನೇ ವಿಧಿಯನ್ನು ರದ್ದುಗೊಳಿಸಿದ ನಂತರ ಹಿಂಸಾತ್ಮಕ ಕೃತ್ಯಗಳಲ್ಲಿ ಇಳಿಕೆ ಕಂಡುಬಂದಿದ್ದು,ಹೂಡಿಕೆ ಪರಿಸರ ನಿರ್ಮಾಣವಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬುಧವಾರ ಹೇಳಿದ್ದಾರೆ. ಕಾಶ್ಮೀರ ಬಜೆಟ್ ಮಂಡಿಸುವ ಬಗ್ಗೆ ನಡೆದ ಚರ್ಚೆಯಲ್ಲಿ ಮಾತನಾಡಿದ ನಿರ್ಮಲಾ, ‘ಕಾಶ್ಮೀರದಲ್ಲಿ 890 ಕೇಂದ್ರೀಯ ಕಾನೂನು ಅಳವಡಿಸಲಾಗಿದೆ.ಇದರಿಂದ ಮೊದಲು ಹಕ್ಕುಗಳಿಂದ ವಂಚಿತರಾದವರು ಈಗ ಸರ್ಕಾರಿ ಉದ್ಯೋಗಗಳನ್ನು ಪಡೆಯಬಹುದಾಗಿದೆ.ಆಸ್ತಿ ಖರೀದಿಸಬಹುದಾಗಿದೆ. ಇದಲ್ಲದೇ ಅನ್ಯಾಯ, ತಾರತಮ್ಯ ಮಾಡುವ 250 ರಾಜ್ಯ