ಹೈದರಾಬಾದ್: ಮದುವೆಯಾಗಲು ಹುಡುಗಿ ಸಿಗಲ್ಲ ಎಂದು ಕೊರಗುತ್ತಿದ್ದ ಅರ್ಚಕರ ನೆರವಿಗೆ ತೆಲಂಗಾಣ ಸರ್ಕಾರ ಮುಂದೆ ಬಂದಿದೆ. ಕಲ್ಯಾಣಮಸ್ತು ಎಂಬ ಹೊಸ ಯೋಜನೆಯನ್ನು ತರಲು ತೆಲಂಗಾಣ ಸರ್ಕಾರ ಮುಂದಾಗಿದೆ. ಅದರಂತೆ ಅರ್ಚಕರನ್ನು ಮದುವೆಯಾಗುವವರಿಗೆ 3 ಲಕ್ಷ ರೂ. ನಗದು ಮತ್ತು ಮದುವೆ ಖರ್ಚಿಗೆ 1 ಲಕ್ಷ ರೂ. ಸಿಗಲಿದೆ. ಮುಂದಿನ ತಿಂಗಳಿನಿಂದಲೇ ಈ ಯೋಜನೆ ಜಾರಿಗೆ ತರಲು ಸರ್ಕಾರ ಉದ್ದೇಶಿಸಿದೆಯಂತೆ.ಆದಾಯ ಕಡಿಮೆ ಎನ್ನುವ ಕಾರಣಕ್ಕೆ ಅರ್ಚಕರನ್ನು ಮದುವೆ ಮಾಡಲು ಯುವತಿಯರು