ಮುಂಬೈ : ಶಿವಸೇನೆ ಒಡೆದಂತೆ ಮಹಾರಾಷ್ಟ್ರದಲ್ಲಿ ಎನ್ಸಿಪಿ ಒಡೆಯುತ್ತಾ ಎಂಬ ಅನುಮಾನ ಸೃಷ್ಟಿಯಾಗಿದೆ. ಎನ್ಸಿಪಿ ನಾಯಕ ಅಜಿತ್ ಪವಾರ್ ಅವರು ಬಿಜೆಪಿ-ಶಿಂಧೆ ಶಿವಸೇನೆ ಸರ್ಕಾರದಲ್ಲಿ ಸೇರಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ಬಿಜೆಪಿ ಜತೆ ಸೇರಲು 53 ಎನ್ಸಿಪಿ ಶಾಸಕರ ಪೈಕಿ 40 ಶಾಸಕರ ಸಹಿ ಪಡೆದಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಈ ವರದಿಯ ನಡುವೆ ಅಜಿತ್ ಪವಾರ್ ಸಾಮಾಜಿಕ ಜಾಲತಾಣದಲ್ಲಿ ಎನ್ಸಿಪಿ ಲೋಗೋವನ್ನು ತೆಗೆದಿದ್ದು ಅಂತೆ-ಕಂತೆ ಸುದ್ದಿಗಳಿಗೆ ಮತ್ತಷ್ಟು ರೆಕ್ಕೆಪುಕ್ಕ