ಮುತ್ತಿನ ನಗರಿ ಹೈದರಾಬಾದ್ನ ನಾನಕ್ ರಾಮಗುಡ ಎಂಬಲ್ಲಿ ನಿರ್ಮಾಣ ಹಂತದ 6 ಮಹಡಿಯ ಕಟ್ಟಡ ಕುಸಿದು ಕನಿಷ್ಠ 10 ಮಂದಿ ಕೂಲಿ ಕಾರ್ಮಿಕರು ದುರ್ಮರಣವನ್ನಪ್ಪಿದ ಶಂಕೆ ವ್ಯಕ್ತವಾಗಿದೆ. ಗುರುವಾರ ರಾತ್ರಿ 9.30ರ ಸುಮಾರಿಗೆ ದುರ್ಘಟನೆ ನಡೆದಿದೆ. ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿಕೊಂಡಿದ್ದ ಕಾರ್ಮಿಕರು ಮತ್ತು ಭದ್ರತಾ ಸಿಬ್ಬಂದಿ ಸೇರಿ ಒಟ್ಟು 14 ಕುಟುಂಬಗಳು ಅದೇ ಕಟ್ಟಡದ ನೆಲ ಮಹಡಿಯಲ್ಲಿ ವಾಸವಾಗಿದ್ದರು ಎಂದು ಹೇಳಲಾಗುತ್ತಿದೆ. ನಿನ್ನೆ ರಾತ್ರಿ 9.30ಕ್ಕೆ ಕಟ್ಟಡ ಬಹುದೊಡ್ಡ