ಕೊರೋನಾದಿಂದಾಗಿ ಶೇ.60 ಭಾರತೀಯರ ಕತೆ ಹೀಗಾಗಿದೆ

ನವದೆಹಲಿ| Krishnaveni K| Last Modified ಗುರುವಾರ, 6 ಮೇ 2021 (09:04 IST)
ನವದೆಹಲಿ: ದೇಶದಲ್ಲಿ ಕೊರೋನಾ, ಲಾಕ್ ಡೌನ್ ಇವೆರಡು ಶಬ್ಧ ಕಿವಿಗೆ ಬಿದ್ದರೆ ಜನ ಬೆಚ್ಚಿಬೀಳುವಂತಾಗಿದೆ. ರೋಗದ ಜೊತೆಗೆ ಮನೆಯೊಳಗೆ ಕೂರುವ, ಸಾಮಾನ್ಯ ಜೀವನ ನಡೆಸಲಾಗದ ಅಸಹಾಯಕತೆ ಇನ್ನೊಂದೆಡೆ.
 > ನೂತನ ಅಧ್ಯಯನವೊಂದರ ಪ್ರಕಾರ ಶೇ.60 ರಷ್ಟು ಭಾರತೀಯರು ಕೊರೋನಾದಿಂದಾಗಿ ದೇಶದಲ್ಲಿ ಉಂಟಾಗಿರುವ ಅವಸ್ಥೆ, ವೈದ್ಯಕೀಯ ಸೌಲಭ್ಯದ ಕೊರತೆಯಿಂದಾಗಿ ಬೇಸತ್ತು ಹೋಗಿದ್ದಾರಂತೆ. ಇದರಿಂದಾಗಿ ಹೆಚ್ಚಿನ ಭಾರತೀಯರು ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ ಎಂದು ಅಧ್ಯಯನವೊಂದು ಬಹಿರಂಗಪಡಿಸಿದೆ.>   ಇನ್ನಷ್ಟು ದಿನ ಲಾಕ್ ಡೌನ್ ಮುಂದುವರಿದರೆ ಮನೆಯೊಳಗೆ ಕೂತೂ ಜನರ ಮಾನಸಿಕ ಸ್ಥಿತಿ ತೀರಾ ಹದಗೆಡುವುದು ಸಹಜ. ಕಳೆದ ಬಾರಿಯೂ ಸಾಕಷ್ಟು ಇಂತಹ ಪ್ರಕರಣಗಳು ಕೇಳಿಬಂದಿದ್ದವು.



ಇದರಲ್ಲಿ ಇನ್ನಷ್ಟು ಓದಿ :