ದೇಶದಲ್ಲಿ ಮೋದಿ ಅಲೆ ಕುಗ್ಗುತ್ತಿದೆ ಎಂದು ರಾಜಕೀಯ ಪಂಡಿತರು ಹೇಳುತ್ತಿರಬಹುದು. ಆದರೆ ಸಮೀಕ್ಷೆಯೊಂದು ಇದು ಸುಳ್ಳೆನ್ನುತ್ತಿದೆ. ಇತ್ತೀಚಿಗೆ ನಡೆಸಲಾದ ಒಂದು ಸಮೀಕ್ಷೆಯ ಪ್ರಕಾರ ದೇಶದ ಶೇ.70ರಷ್ಟು ಜನ ಮೋದಿ ಅವರ ಆಡಳಿತಕ್ಕೆ ತೃಪ್ತಿ ವ್ಯಕ್ತ ಪಡಿಸಿದ್ದು ಐದು ವರ್ಷ ಆಡಳಿತವನ್ನು ಪೂರೈಸಿದ ಬಳಿಕ ಸಹ ಅವರು ಮತ್ತೆ ಅಧಿಕಾರಕ್ಕೆ ಬರಬೇಕು ಎಂದು ಬಯಸಿದ್ದಾರೆ.