ಲಕ್ನೋ(ಆ.17): 2022ರ ಉತ್ತರ ಪ್ರೇದೇಶ ವಿಧಾನಸಭೆ ಚುನಾವಣೆಗೆ ಸಿದ್ದತೆ ನಡೆಸಿರುವ ಕಾಂಗ್ರೆಸ್ ಪಕ್ಷ, ಜನರನ್ನು ತಲುಪಲು ರಾಜ್ಯದ 75 ಜಿಲ್ಲೆಗಳ 30 ಸಾವಿರಕ್ಕೂ ಹೆಚ್ಚು ಗ್ರಾಮಗಳಲ್ಲಿ ತಲಾ 75 ಗಂಟೆಗಳನ್ನು ಕಳೆಯಲು ಕಾಂಗ್ರೆಸ್ ನಾಯಕರಿಗೆ ಹಾಗೂ ಪಕ್ಷದ ಕಾರ್ಯಕತರಿಗೆ ಸಲಹೆ ನೀಡಿದೆ. ಕಾಂಗ್ರೆಸ್ ನಡೆಸುತ್ತಿರುವ ‘ಜೈ ಭಾರತ್ ಮಹಾಸಂಪರ್ಕ ಅಭಿಯಾನ’ ಆಗಸ್ಟ್ 19ರಿಂದ ಆರಂಭವಾಗಲಿದೆ. ‘ಜನರನ್ನು ನೇರವಾಗಿ ಭೇಟಿ ಮಾಡಿ ಪಕ್ಷದ ಕಾರ್ಯಗಳನ್ನು ತಿಳಿಸಲು 75 ಜಿಲ್ಲೆಗಳಲ್ಲಿ ತಲಾ 75