ಅದೊಂದು ಬೆಂಗಳೂರೇ ಬೆಚ್ಚಿಬಿದ್ದಿದಂಥಾ ಘಟನೆ. ಹಾಡಹಗಲೇ ಬಸವೇಶ್ವರ ನಗರದ ರೌಡಿ ಶೀಟರ್ ಸುನೀಲ್ ಮನೆಗೆ ನುಗ್ಗಿದ್ದ ರೌಡಿಗಳ ಗುಂಪು ಹೊರಗೆಳೆದು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಂದಿದ್ದರು. ಪ್ರಕರಣ ಸಂಬಂಧ ರೋಪಿಗಳ ಜಾಡು ಹಿಡಿದು ಹೊರಟಿದ್ದ ಪೊಲೀಸರು ನಾಗರಾಜ್ ಅಲಿಯಾಸ್ ಸ್ಪಾಟ್ ನಾಗ ಸೇರಿ 9 ಆರೋಪಿಗಳನ್ನ ನೆರೆಯ ಆಂಧ್ರಪ್ರದೇಶದಲ್ಲಿ ಬಂಧಿಸಿದ್ದಾರೆ. ಈ ಹಿಂದೆ ರೌಡಿ ಸುನೀಲನ ಗ್ಯಾಂಗ್ ಸ್ಪಾಟ್ ನಾಗನ ಮೇಲೆ ಹಲ್ಲೆ ನಡೆಸಿತ್ತು. ಇದಾದ ಬಳಿಕ ಹೆಂಡತಿ ಮಕ್ಕಳು ನಾಗನನ್ನ