ಹೈದರಾಬಾದ್: ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ವೈ.ಎಸ್.ರಾಜಶೇಖರ ರೆಡ್ಡಿ ಅವರ ಸ್ಮರಣಾರ್ಥ, ಅವರ ಪತ್ನಿ ವೈ.ಎಸ್.ವಿಜಯಮ್ಮ ಅವರು ಗುರುವಾರ ಇಲ್ಲಿ ಏರ್ಪಡಿಸಿದ್ದ ಸಭೆಗೆ ಅವರ ಪುತ್ರ, ಆಂಧ್ರ ಪ್ರದೇಶದ ಮುಖ್ಯಮಂತ್ರಿ ಜಗನ್ಮೋಹನ್ ರೆಡ್ಡಿ ಗೈರಾಗಿದ್ದರು. ಹೈದರಾಬಾದಿನಲ್ಲಿ ನಡೆದ 12ನೇ ವಾರ್ಷಿಕೋತ್ಸವ ಸಭೆಗೆ ಜಗನ್ ಹಾಜರಾಗದಿರುವುದು ಮತ್ತು ಎಡುಪುಲಪಾಯದಲ್ಲಿ ನಡೆದ ಕಾರ್ಯಕ್ರಮಗಳನ್ನು ಗಮನಿಸಿದರೆ ವೈಎಸ್ಆರ್ ಕುಟುಂಬದಲ್ಲಿ ಬಿರುಕು ಮೂಡಿರಬಹುದು ಎಂದು ರಾಜಕೀಯ ವಿಶ್ಲೇಷಕರು ಸಂಶಯ ಪಟ್ಟಿದ್ದಾರೆ. ಜಗನ್ ಅವರ ಸಹೋದರಿ ವೈ.ಎಸ್.ಶರ್ಮಿಳಾ