ಮುಂಬೈ : ನಿಯಮ ಉಲ್ಲಂಘನೆ ಮಾಡಿರುವ ಆರು ಕೆಮ್ಮಿನ ಸಿರಪ್ ತಯಾರಕ ಕಂಪನಿಗಳ ಪರವಾನಗಿ ಅಮಾನತುಗೊಳಿಸಲಾಗಿದೆ ಎಂದು ಮಹಾರಾಷ್ಟ್ರ ಸರ್ಕಾರ ವಿಧಾನಸಭೆಯಲ್ಲಿ ಘೋಷಿಸಿದೆ. ಬಿಜೆಪಿ ಶಾಸಕ ಆಶಿಕ್ ಶೇಲಾರ್ ಹಾಗೂ ಇತರರ ನೊಟೀಸ್ಗೆ ಉತ್ತರಿಸಿದ ಆಹಾರ ಮತ್ತು ಔಷಧ ಆಡಳಿತ ಸಚಿವ ಸಂಜಯ್ ರಾಥೋಡ್ ಅವರು ಈ ಮಾಹಿತಿ ಹಂಚಿಕೊಂಡಿದ್ದಾರೆ. ಉತ್ತರ ಪ್ರದೇಶದ ನೋಯ್ಡಾ ಮೂಲದ ಸಂಸ್ಥೆ ತಯಾರಿಸಿದ್ದ ಕೆಮ್ಮಿನ ಸಿರಪ್ನಿಂದ ಕಳೆದ ವರ್ಷ ಉಜ್ಬೇಕಿಸ್ತಾನದ 18 ಮಕ್ಕಳು