ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿದ್ದ ಹೆಲಿಕಾಪ್ಟರ್ ಬಲವಂತದಿಂದ ಭೂ ಸ್ಪರ್ಶ ಮಾಡಿದ ಘಟನೆ ನಡೆದಿದೆ. ನಾಶಿಕ್ನಿಂದ ಔರಂಗಾಬಾದ್ಗೆ ಹೆಲಿಕಾಪ್ಟರ್ನಲ್ಲಿ ತೆರಳುವಾಗ ಈ ಘಟನೆ ನಡೆದಿದ್ದು, ಭೂಮಿ ಮೇಲಿಂದ ಟೇಕ್ ಆಫ್ ಆಗಿ ಕೇವಲ 50 ಅಡಿ ಎತ್ತರ ಏರಿದಾಗ ಅದಕ್ಕೆ ಮುಂದೆ ಹಾರಲು ಸಾಧ್ಯವಾಗಲಿಲ್ಲ. ಆದರೆ ಪೈಲಟ್ ಕೆಲವೇ ಮೀಟರ್ಗಳ ಅಂತರದಲ್ಲಿ ಹೆಲಿಕಾಪ್ಟರನ್ನು ಸುರಕ್ಷಿತವಾಗಿ ಇಳಿಸಿದರು ಎನ್ನಲಾಗಿದೆ. ಫಡ್ನವೀಸ್ ಅವರು ಜಲ ಸಂಪನ್ಮೂಲ ಸಚಿವ ಗಿರೀಶ್