ಮೊದಲ ರಾತ್ರಿಯೇ ಪತ್ನಿಯೊಂದಿಗೆ ರಾಕ್ಷಸನಂತೆ ನಡೆದುಕೊಂಡ ಪತಿ!

ಹೈದರಾಬಾದ್| Hanumanthu.P| Last Modified ಸೋಮವಾರ, 4 ಡಿಸೆಂಬರ್ 2017 (14:39 IST)
ಮದುವೆ ಮಾಡಿಕೊಂಡ ನಂತರ ಮೊದಲ ರಾತ್ರಿಯಲ್ಲೇ ಪತ್ನಿಯೊಂದಿಗೆ ರಾಕ್ಷಸನಂತೆ ನಡೆದುಕೊಂಡಿರುವ ಪತಿ, ಪತ್ನಿಗೆ ಹಿಂಸೆ ನೀಡಿರುವ ಘಟನೆ ಆಂಧ್ರ ಪ್ರದೇಶದಲ್ಲಿ ನಡೆದಿದೆ.
ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಮೋತರಂಗನಪಲ್ಲಿಯಲ್ಲಿ ಪತ್ನಿಯೊಂದಿಗೆ ಮೊದಲ ರಾತ್ರಿ ಮಾಡಿಕೊಂಡ ಪತಿಯೊಬ್ಬ ಪತ್ನಿಯನ್ನು ಚೂರಿಯಿಂದ ಇರಿದು, ದೇಹದ ಭಾಗಗಳನ್ನು ಕಚ್ಚಾಡಿದ್ದಾನೆ. ಸಾಲದೆಂಬಂತೆ ಸೂಕ್ಷ್ಮ ಭಾಗಗಳನ್ನು ಗುದ್ದಿ ವಿಕೃತಿ ಮೆರೆದಿದ್ದಾನೆ.
ಘಟನೆಯಿಂದ ಗಾಯಗೊಂಡಿರುವ 24 ವರ್ಷದ ನವವಿವಾಹಿತೆಯ ಸ್ಥಿತಿ ಗಂಭೀರವಾಗಿದ್ದು, ಚಿತ್ತೂರು ಆಸ್ಪತ್ರೆಯಿಂದ ಚೆನ್ನೈಗೆ ಸಾಗಿಸಲಾಗಿದೆ. ರಾಕ್ಷಸ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಶಿಕ್ಷಕನಾಗಿರುವ ಆರೋಪಿ ಎಂಬಿಎ ಪದವೀಧರೆಯ ಜೊತೆ ಮಾಡಿಕೊಂಡಿದ್ದು, ಪತ್ನಿ ಮೊದಲ ರಾತ್ರಿ ರೂಮಿಗೆ ಬರುತ್ತಿದ್ದಂತೆ ಮುಖಕ್ಕೆ ಹೊಡೆದಿದ್ದಾನೆ. ಚೂರಿಯಿಂದ ಇರಿದು, ಅಂಗಾಂಗಗಳನ್ನು ಕಚ್ಚಾಡಿದ್ದಾನೆ. ಪ್ರಾಣ ಭಯದಿಂದ ಆರೋಪಿಯಿಂದ ತಪ್ಪಿಸಿಕೊಂಡು ರೂಮಿನ ಹೊರಗೆ ಬಂದಿದ್ದಾಳೆ ಎಂದು ನವವಿವಾಹಿತೆ ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.


ಇದರಲ್ಲಿ ಇನ್ನಷ್ಟು ಓದಿ :