ಛತ್ತೀಸ್ಘಡ : ಕಳೆದ ಮೂರು ದಿನಗಳಿಂದ ಸಂಪೂರ್ಣವಾಗಿ ಅನ್ನಾಹಾರಗಳನ್ನು ತ್ಯಜಿಸಿದ್ದ ಮುನಿಗಳು ಇಂದು ಅಸುನೀಗಿದ್ದು, ಜೈನ ಮುನಿ ಆಚಾರ್ಯ ವಿದ್ಯಾಸಾಗ ಮಹಾರಾಜ್ ಸಲ್ಲೇಖನ ವ್ರತದ ಮೂಲಕ ದೇಹವನ್ನು ತೊರೆದಿದ್ದಾರೆ. ಪ್ರಧಾನಿ ಮೋದಿ ಸೇರಿದಂತೆ ಹಲವು ಗಣ್ಯರು ಆಚಾರ್ಯರ ಅಗಲಿಕೆಗೆ ಶೃದ್ಧಾಂಜಲಿ ಸಲ್ಲಿಸಿದ್ದಾರೆ. ಪ್ರಧಾನ ನರೇಂದ್ರ ಮೋದಿ ಈ ಕುರಿತು ಎಕ್ಸ್ ಖಾತೆಯ ಮೂಲಕ ಸಂದೇಶ ಹಂಚಿಕೊಂಡಿದ್ದಾರೆ. ಆಚಾರ್ಯ ಅಸಂಖ್ಯಾತ ಭಕ್ತರೊಂದಿಗೆ ನಾನೂ ಸಹ ಅವರ ಆಶೀರ್ವಾದ ಪಡೆದಿದ್ದೇನೆ. ಮುಂದಿನ ಪೀಳಿಗೆಗೆ ಅವರ ಸೇವೆ, ಸಂಕಲ್ಪ ಹಾಗೂ ಧೃಡತೆಗಳು ಉದಾಹರಣೆಯಾಗಲಿವೆ.